ಬೈಂದೂರು;ಯುವಕರು ಮೊಬೈಲ್ಗಳ ದಾಸರಾಗದೆ ಸಿಕ್ಕ ಸಮಯದಲ್ಲಿ ಸಾಮಾಜಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರೆ ತಮ್ಮ ತಮ್ಮ ಗ್ರಾಮಗಳನ್ನು ಅಭಿವೃದ್ಧಿಪಡಿಸಬಹುದು.ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಂಸ್ಕಾರ ಮತ್ತು ಭಕ್ತಿಗೆ ಪೂರಕವಾದ ಅಂಶಗಳನ್ನು ಕಲಿಸಬೇಕಾದ ಜವಬ್ದಾರಿ ನಮ್ಮೆಲ್ಲರಿಗಿದೆ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿ ಹೊಸೂರು ಇದರ ಗೌರವಾಧ್ಯಕ್ಷ ವಾಸುದೇವ ಮರಾಠಿ ಹೇಳಿದರು ಅವರು ಸ.ಹಿ.ಪ್ರಾ.ಶಾಲೆ ಹೊಸೂರಿನಲ್ಲಿ ನಡೆದ 19ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದರು.

ಹೊಸೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಾಗಪ್ಪ ಮರಾಠಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ಉಪನ್ಯಾಸಕ ಸತೀಶ ಎಮ್,ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಚೈತ್ರ ಬೈಂದೂರು,ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್, ಗಣೆಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ ಪೂಜಾರಿ,ಮುಲ್ಲಿಬಾರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಮರಾಠಿ,ಹೊಸೂರು ಚಿಕ್ಕಮ್ಮ -ಚೆನ್ನಮ್ಮ ದೇವಸ್ಥಾನದ ಅಧ್ಯಕ್ಷ ನಾರಾಯಣ ಮರಾಠಿ,ಕಾರ್ಯದರ್ಶಿ ಸಂತೋಷ ಮರಾಠಿ ಉಪಸ್ಥಿತರಿದ್ದರು.

ಸ.ಹಿ.ಪ್ರಾ.ಶಾಲೆ ಕೊಲ್ಲೂರು ಶಾಲೆಯ ಶಿಕ್ಷಕ ಶಿವರಾಮ ಮರಾಠಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕಿ ವಸಂತಿ ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ರಾಜು ಸಿ.ಮರಾಠಿ ವಂದಿಸಿದರು.

 

 

Leave a Reply

Your email address will not be published. Required fields are marked *

four × 3 =