ಶಿರೂರು: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಗೆ ಆಗಮಿಸಿರುವ ಕೇಂದ್ರ ಮೀಸಲು ಪಡೆ (ಸಿ.ಆರ್.ಪಿ.ಎಫ್) ಯೋಧರು ಹಾಗೂ ಪೊಲೀಸರು ಗುರುವಾರ ಸಂಜೆ ಬೈಂದೂರು ಹಾಗೂ ಶಿರೂರಿನಲ್ಲಿ ಪಥ ಸಂಚಲನ ನಡೆಸಿದರು.

ಈ ಸಂದರ್ಭದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,ಠಾಣಾಧಿಕಾರಿ ನಿರಂಜನ ಗೌಡ,ಗಂಗೊಳ್ಳಿ ಪಿ.ಎಸ್.ಐ ವಿನಯ ಕೊರ್ಲಹಳ್ಳಿ ಹಾಗೂ ಇಲಾಖೆಯ ಸಿಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

three × 4 =