ಬೈಂದೂರು: ವಿಧಾನಸಭಾ ಚುನಾವಣೆಯ ದಿನಾಂಕ ನಿಗಧಿಯಾಗಿದೆ.ಬೇಸಿಗೆಯ ತಾಪದ ಜೊತೆಗೆ ಚುನಾವಣೆಯ ಕಾವು ಕೂಡ ಎರುತ್ತಿದೆ.ಆಯಾಯ ಕ್ಷೇತ್ರಗಳಲ್ಲಿ ದಿನಕ್ಕೊಂದು ಕುತೂಹಲದ ನಿರೀಕ್ಷೆಯಾದರೆ ಬೈಂದೂರು ಭಾಗದಲ್ಲಿ ಸದ್ಯ ಕೇಳಿಬರುವ ಒಂದೆ ಒಂದು ಪ್ರಶ್ನೆ ಅಂದರೆ ಹ್ವಾಯ್ ಈ ಬಾರಿ ಸೀಟ್ ಯಾರಿಗಂಬ್ರೆ..
ಬೈಂದೂರು ವಿಧಾನಸಭಾ ಕ್ಷೇತ್ರ ಉಡುಪಿ ಜಿಲ್ಲಾ ರಾಜಕೀಯ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ.ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಇಷ್ಟರವರೆಗೆ ಮಂತ್ರಿ ಸ್ಥಾನ ದೊರೆತಿಲ್ಲ.ಹೀಗಾಗಿ ಈ ಬಾರಿಯ ಚುನಾವಣೆ ಕುಂದಾಪುರ ತಾಲೂಕಿಗೆ ಬಹುನಿರೀಕ್ಷೆ ಇದೆ.ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಂಡಿದೆ.ಆದರೆ ಬಿಜೆಪಿ ಪಾಳಯದಲ್ಲಿ ಮಾತ್ರ ಇದುವರೆಗೆ ಅಭ್ಯರ್ಥಿಯ ಹೆಸರು ಅಂತಿಮಗೊಂಡಿಲ್ಲ.ಹೀಗಾಗಿ ನಾಲ್ಕೈದು ಆಕಾಂಕ್ಷಿಗಳು ಪ್ರಚಾರದಲ್ಲಿ ತೊಡಗಿದ್ದು ಹೈಕಮಾಂಡ್ ಯಾರನ್ನು ಅಂತಿಮಗೊಳಿಸುತ್ತಾರೆ ಅನ್ನೋದೆ ಕುತೂಹಲ.ಹೀಗಾಗಿ ಇಷ್ಟರವರೆಗೆ ಚುನಾವಣೆಯ ಕಾವು ಏರಿದಂತಿಲ್ಲ.ಎರಡು ಪಕ್ಷದ ಅಭ್ಯರ್ಥಿಗಳ ಹೆಸರು ಪೈನಲ್ ಆದರೆ ಕಾರ್ಯಕರ್ತರಲ್ಲಿ ಹುರುಪು ಕಾಣಬಹುವುದಾಗಿದೆ.ಹೀಗಾಗಿ ಪ್ರಸ್ತುತ ಎಲ್ಲರಲೂ ಒಂದು ಕುತೂಹಲ ಈ ಬಾರಿ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೋದು.
ಕರಾವಳಿ ಹಾಗೂ ಮಲೆನಾಡಿನಿಂದ ಕೂಡಿರುವ ಗ್ರಾಮೀಣ ಭಾಗವೇ ಹೆಚ್ಚಾಗಿರುವ ಬೈಂದೂರಿನಲ್ಲಿ ಬಡ ಮತ್ತು ಮಧ್ಯಮ ವರ್ಗದವರು ಹೆಚ್ಚಾಗಿದ್ದಾರೆ.ಕೃಷಿಯೇ ಪ್ರಧಾನ,ಬ್ರಹತ್ ಉದ್ಯಮ ಕೈಗಾರಿಕೆಗಳು ಇಲ್ಲಿಲ್ಲ.ಪ್ರವಾಸೋಧ್ಯಮಕ್ಕೆ ವಿಪುಲ ಅವಕಾಶಗಳಿದ್ದರು ಹೆಚ್ಚಿನ ಪ್ರೋತ್ಸಾಹ ದೊರೆತಿಲ್ಲ ಎಂಬ ಆರೋಪಗಳಿವೆ.ಬೈಂದೂರು ವಿಧಾನಸಭಾ ಕ್ಷೇತ್ರವು ಉತ್ತರದಲ್ಲಿ ಶಿರೂರಿನಿಂದ ಪ್ರಾರಂಭವಾಗಿ ತಲ್ಲೂರು ತನಕ ವಿಸ್ತರಿಸಿದೆ.65 ಗ್ರಾಮ ಹಾಗೂ 246 ಬೂತ್‌ಗಳನ್ನು ಹೊಂದಿರುವ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೊಳಪಟ್ಟಿದೆ.
2018ರ ವಿಧಾನಸಭಾ ಚುನಾವಣೆಯ ಫಲಿತಾಂಶ.
ಬಿ.ಎಮ್.ಸುಕುಮಾರ ಶೆಟ್ಟಿ (ಬಿಜೆಪಿ) ಒಟ್ಟು ಪಡೆದ ಮತಗಳು:96,029
ಕೆ.ಗೋಪಾಲ ಪೂಜಾರಿ (ಕಾಂಗ್ರೇಸ್) ಒಟ್ಟು ಪಡೆದ ಮತಗಳು: 71,636
2013ರ ವಿಧಾನಸಭಾ ಚುನಾವಣೆಯ ಫಲಿತಾಂಶ.
ಕೆ.ಗೋಪಾಲ ಪೂಜಾರಿ (ಕಾಂಗ್ರೇಸ್) ಒಟ್ಟು ಪಡೆದ ಮತಗಳು:82,277
ಬಿ.ಎಮ್.ಸುಕುಮಾರ ಶೆಟ್ಟಿ (ಬಿಜೆಪಿ) ಒಟ್ಟು ಪಡೆದ ಮತಗಳು;51,128
2008 ರ ವಿಧಾನಸಭಾ ಚುನಾವಣೆಯ ಫಲಿತಾಂಶ.
ಕೆ.ಲಕ್ಷ್ಮೀನಾರಾಯಣ (ಬಿಜೆಪಿ) ಒಟ್ಟು ಪಡೆದ ಮತಗಳು;62,196
ಕೆ.ಗೋಪಾಲ ಪೂಜಾರಿ (ಕಾಂಗ್ರೇಸ್) ಒಟ್ಟು ಪಡೆದ ಮತಗಳು:54,226
ಬೈಂದೂರು ಕ್ಷೇತ್ರದ ಮತದಾರರ ವಿವರ.
ಒಟ್ಟು ಮತದಾರರು: 2,27,134
ಪುರುಷ ಮತದಾರರು:1,10,983
ಮಹಿಳಾ ಮತದಾರರು :1,16,150
ಲಿಂಗತ್ವ ಅಲ್ಪಸಂಖ್ಯಾತರು: 01
News/Girish shiruru