ಶಿರೂರು: ನಾಖುದಾ ವೆಲ್‌ಫೇರ್ ಅಸೋಸಿಯೇಷನ್,ಜಮಾಲಿತ್ ಇಸ್ಲಾಮಿ ಹಿಂದ್ ಶಿರೂರು ಹಾಗೂ ನಾರಾಯಣ ಕಣ್ಣಿನ ಆಸ್ಪತ್ರೆ ಬೈಂದೂರು ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮ ಮಾ.5 ರಂದು ಪೂರ್ವಾಹ್ನ 9 ಗಂಟೆಗೆ ಸ.ಹಿ.ಪ್ರಾ.ಶಾಲೆ ಹಡವಿನಕೋಣೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.