ಬೈಂದೂರು; ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಲಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಹೇಳಿದರು ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಬೈಂದೂರಿನ ಮುಳ್ಳಿಕಟ್ಟೆ ನಗು ಸಿಟಿಯಲ್ಲಿ ಫೆ.20 ರಂದು ಬ್ರಹತ್ ಕಾರ್ಯಕರ್ತರ ಸಭೆ ನಡೆಯಲಿದೆ.ಈಗಾಗಲೇ ಸಿದ್ದತೆ ನಡೆಯುತ್ತಿದ್ದು ಸುಮಾರು 200 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ಸುಮಾರು 15 ರಿಂದ 20 ಸಾವಿರ ಜನ ಸೇರಲಿದ್ದಾರೆ.ಈಗಾಗಲೇ ಕ್ಷೇತ್ರದಾದ್ಯಂತ ಕಾರ್ಯಕರ್ತರಿಗೆ ಜವಬ್ದಾರಿ ನೀಡಿದ್ದು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲಿದೆ.ರಾಜ್ಯ ಹಾಗೂ ರಾಷ್ಟ್ರದ ಅನೇಕ ನಾಯಕರು ಆಗಮಿಸಲಿದ್ದಾರೆ ಎಂದರು. ಬಜೆಟ್ ಕುರಿತಂತೆ ಪ್ರತಿಕ್ರಯಿಸಿದ ಆವರು ರೈತರ ಹಾಗೂ ಮೀನುಗಾರರು ಸೇರಿದಂತೆ ಅತ್ಯುತ್ತಮ ಜನಸ್ನೇಹಿ ಬಜೆಟ್ ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ.ಬೈಂದೂರು ಕ್ಷೇತ್ರಕ್ಕೂ ಕೂಡ ವಿಶೇಷವಾದ ಕೊಡುಗೆ ದೊರೆತಿದೆ ಎಂದರು.
ಮಾರ್ಚ್ ತಿಂಗಳಲ್ಲಿ ಬೈಂದೂರು ಮಿನಿ ವಿಧಾನಸೌಧ ಹಾಗೂ ಬೈಂದೂರು ಕೆ.ಎಸ್.ಆರ್.ಟಿ.ಸಿ ಹೊಸ ಬಸ್ ನಿಲ್ದಾಣ ಉದ್ಘಾಟನೆ;ಬಹುನಿರೀಕ್ಷಿತ ಬೈಂದೂರು ಮಿನಿ ವಿಧಾನಸೌಧ ಹಾಗೂ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮಾರ್ಚ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ.ಈಗಾಗಲೇ ಕೆಲಸ ಅತ್ಯಂತ ವೇಗವಾಗಿ ನಡೆಯುತ್ತಿದ್ದು ದಿನಾಂಕ ಶೀಘ್ರ ತಿಳಿಸಲಾಗುವುದು ಎಂದರು.ಬೈಂದೂರು ಕ್ಷೇತ್ರದಲ್ಲಿ ನೀರಾವರಿ,ಕೃಷಿ ಸೇರಿದಂತೆ ಅತ್ಯುತ್ತಮ ಅಭಿವೃದ್ದಿ ಕಾರ್ಯ ನಡೆದಿದೆ.ಹೀಗಾಗಿ ಜನರು ಬಿಜೆಪಿ ಸರಕಾರ ಬೆಂಬಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರ್,ಪ್ರಕಾಶ ಪೂಜಾರಿ ಜಡ್ಡು ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
News;Giri shiruru