ಬೈಂದೂರು: ಕಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ವಿಶೇಷವಾದ ಕಾಳಜಿ ವಹಿಸಬೇಕು.ಅನೇಕ ಕಣ್ಣಿನ ರೋಗಗಳು ಸೂಕ್ತ ಮಾಹಿತಿ ಕೊರತೆಯಿಂದ ಕಾಣಿಸಿಕೊಳ್ಳುತ್ತದೆ.ಹೀಗಾಗಿ ಗ್ರಾಮೀಣ ಭಾಗದಲ್ಲಿ ಮಾಹಿತಿ ಶಿಬಿರಗಳನ್ನು ನಡೆಸುವುದರ ಮೂಲಕ ಜಾಗ್ರತಿ ಮೂಡಿಸಬೇಕು.ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗವಾಗಿದೆ.ಇದನ್ನು ಅತೀ ಜಾಗರೂಕತೆಯಿಂದ ಇರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.ಬಡ ಜನರಿಗೆ ಇಂತಹ ಉಚಿತ ಕಣ್ಣಿನ ತಪಾಸಣೆ ಶಿಬಿರಗಳು ನಡೆಸುತ್ತಿರುವ ಸ್ಟಾರ್ ಹೆಲ್ತ್ ಹಾಗೂ ಪ್ರಸಾದ ನೇತ್ರಾಲಯದ ಸೇವೆ ಶ್ಲಾಘನೀಯವಾಗಿದೆ ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ ಮೊಗವೀರ ಹೇಳಿದರು ಅವರು ಬೈಂದೂರು ಶ್ರೀ ಸೀತಾರಾಮ ಚಂದ್ರ ಕಲ್ಯಾಣ ಮಂಟದಲ್ಲಿ ನಡೆದ ಸ್ಟಾರ್ ಹೆಲ್ತ್ ಇನ್ಸುರೆನ್ಸ್ ಶಿರೂರು -ಬೈಂದೂರು ಶಾಖೆ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣೆ,ಪೊರೆ ಶಸ್ತ್ತ ಚಿಕಿತ್ಸೆ ಹಾಗೂ ನೇತ್ರದಾನ ನೊಂದಣಿ ಶಿಬಿರ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಪ್ರಸಾದ ನೇತ್ರಾಲಯದ ಡಾ.ಅಂಜಲಿ,ಡಾ.ರೋಶನ್ ಫಾಯಸ್ ಬಂದೂರು,ಶಿರೂರು ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ,ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್,ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಬೈಂದೂರು ಗ್ರಾ.ಪಂ ಮಾಜಿ ಅಧ್ಯಕ್ಷ ಜನಾರ್ಧನ ಬೈಂದೂರು,ಪತ್ರಕರ್ತರಾದ ನರಸಿಂಹ ಬಿ,ನಾಯಕ್,ಗಿರೀಶ್ ಶಿರೂರು ಉಪಸ್ಥಿತರಿದ್ದರು.
ಸ್ಟಾರ್ ಹೆಲ್ತ್ ಶಿರೂರು ಶಾಖೆಯ ವ್ಯವಸ್ಥಾಪಕ ರವಿದಾಸ್ ಮೊಗೇರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸ್ಟಾರ್ ಹೆಲ್ತ್ ತರಬೇತಿ ಮತ್ತು ಅಭಿವೃದ್ದಿ ಇಲಾಖೆಯ ಗಜಾನನ ಭಟ್ ಕಾರ್ಯಕ್ರಮ ನಿರ್ವಹಿಸಿದರು.ಉದ್ಯಮಿ ಪ್ರಸಾದ ಪ್ರಭು ವಂದಿಸಿದರು.