ಬೈಂದೂರು: ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಕಾಂಗ್ರೆಸ್ ಕರಾವಳಿ ಪ್ರಜಾ ದ್ವನಿ ಯಾತ್ರೆ ಬ್ರಹತ್ ಸಮಾವೇಶ ಬೈಂದೂರು ರವಿವಾರ ಯಡ್ತರೆ ಬೈಪಾಸ್ ಬಳಿ ನಡೆಯಿತು.ಕರಾವಳಿ ಪ್ರಜಾ ದ್ವನಿ ಯಾತ್ರೆ ಬ್ರಹತ್ ಸಮಾವೇಶ ರಾಜ್ಯ ವಿದಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕರಾವಳಿ ಪ್ರಜಾ ದ್ವನಿ ಯಾತ್ರೆ ಬ್ರಹತ್ ಸಮಾವೇಶ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ಸುಳ್ಳು ಪ್ರಚಾರದ ಮೂಲಕ ಜನರ ಭಾವನೆಗಳಿಗೆ ತಪ್ಪು ಸಂದೇಶ ನೀಡಿ ಅಧಿಕಾರ ಪಡೆದಿದ್ದಾರೆ.ಬಂಡವಾಳ ಶಾಹಿಗಳನ್ನು ಪ್ರೋತ್ಸಾಹಿಸುವ ಬಿಜೆ.ಪಿ ಜನಸಾಮಾನ್ಯರಿಗೆ ಎನೂ ಕೊಡುಗೆ ನೀಡಿದೆ ಎನ್ನುವುದನ್ನು ಪ್ರಶ್ನಿಸಬೇಕಿದೆ.ಅವರು ಲವ್‌ಜಿಹಾದ್,ಜಾತಿ,ಧರ್ಮಗಳ ನಡುವೆ ಕಲಹ ಏರ್ಪಡಿಸುವಂತೆ ಮಾಡಿ ರಾಜಕೀಯ ಲಾಭ ಪಡೆಯುವುದು ಅವರ ಹುಟ್ಟುಗುಣವಾಗಿದೆ.ಬೆಲೆ ಏರಿಕೆ ಕುರಿತು ಮಾತನಾಡುವ ಪ್ರಧಾನಿ ಮೌನಿ ಭಾಭಾರಾಗಿದ್ದಾರೆ.ಭ್ರಷ್ಟಾಚಾರ ಬಿಜೆಪಿ ಆಡಳಿತದ ಸಾಧನೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಳೆದ ವರ್ಷ ಚುನಾವಣೆಯಲ್ಲಿ ಬೈಂದೂರಿನ ಈಗಿನ ಶಾಸಕರು ವಿಮಾನ ನಿಲ್ದಾಣ ಮಾಡುತ್ತೇನೆ.ಐದು ನದಿಗಳನ್ನು ಜೋಡಿಸುತ್ತೇನೆ.ಗೋಳಿಹೊಳೆಯಲ್ಲಿ ಮೆಡಿಕಲ್ ಕಾಲೇಜು ಮಾಡುತ್ತೇನೆ.ನುರು ಹಾಸಿಗೆಯ ಆಸ್ಪತ್ರೆ ಮಾಡುತ್ತೇನೆ ಎಂದೆಲ್ಲಾ ಆಶ್ವಾಸನೆ ನೀಡಿ ಐದು ವರ್ಷ ಕಳೆದರು ಬೈಂದೂರಿನಲ್ಲಿ ಕಮಿಷನ್ ದಂದೆ ಬಿಟ್ಟರೆ ಮತ್ತೇನು ತೋರುತ್ತಿಲ್ಲ.ಕೃಷಿಕರು,ಮೀನುಗಾರರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ,ಎಮ್.ಎ.ಗಫೂರ್,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮದನ್ ಕುಮಾರ್,ಕಾಂಗ್ರೆಸ್ ಮುಖಂಡ ಎಸ್.ರಾಜು ಪೂಜಾರಿ,ರಘುರಾಮ ಶೆಟ್ಟಿ,ದಿನೇಶ ಪುತ್ರನ್,ಗೌರಿ ದೇವಾಡಿಗ,ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ,ರಮೇಶ ಗಾಣಿಗ,ವಿಕಾಸ್ ಕುಮಾರ್ ಹೆಗ್ಡೆ,ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ,ಸಂಪಿಗೇಡಿ ಸಂಜೀವ ಶೆಟ್ಟಿ,ವಾಸುದೇವ ಯಡಿಯಾಳ್ ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಕೊಡವೂರು ಸ್ವಾಗತಿಸಿದರು.ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.ಬೈಂದೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗರಾಜ ಗಾಣಿಗ ವಂದಿಸಿದರು.

News/Giri shiruru

 

Leave a Reply

Your email address will not be published. Required fields are marked *

five × 1 =