ಬೈಂದೂರು: ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕುಂದಾಪ್ರ ಕನ್ನಡವು ಕೇವಲ ಒಂದು ಭಾಷೆಯಲ್ಲ, ಅದೊಂದು ಬದುಕು. ಕೃಷಿ, ಸಂಸ್ಕೃತಿಯ ಜೀವಂತಿಕೆಯನ್ನು ಹೊಂದಿರುವ ಈ ಭಾಷೆ ಆಧುನಿಕತೆಯ ಭರಾಟೆಯಲ್ಲಿ ಯುವ ಪೀಳಿಗೆ ಇಲ್ಲಿನ ಸಂಸ್ಕೃತಿ ಸಂಸ್ಕಾರದಿಂದ ವಿಮುಖರಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಇಲ್ಲಿನ ನೆಲಮೂಲ ಕೃಷಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವ ಈ ಭಾಗದ ಸಮಾನ ಮನಸ್ಕ ತಂಡದ ಕಾರ್ಯ ಶ್ಲಾಘನೀಯ ಎಂದು ಮೂಡುಬದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು ಅವರುಕುಂದಾಪ್ರ ಕನ್ನಡ ಪ್ರತಿಷ್ಠಾನ ಬೈಂದೂರು ವತಿಯಿಂದ ಯಡ್ತರೆ ಜೆ.ಎನ್. ಆರ್ ಸಭಾಭವನದಲ್ಲಿ ನಡೆದ ಕೆಸ್ರಲ್ಲೊಂದಿನ ಗಮ್ಮತ್‌್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಇಲ್ಲಿನ ಕೃಷಿ ಸಂಸ್ಕೃತಿಯಾದ ತಿರಿ ಕಟ್ಟುವುದು, ಭತ್ತ ಕುಟ್ಟುವುದು, ಬುಟ್ಟಿನೇಯುವುದು, ಮಡಿಕೆ ತಯಾರಿಸುವುದು ಸೇರಿದಂತೆ ಹಲವು ಕೃಷಿ ಸಂಸ್ಕೃತಿಯನ್ನು ಅನಾವರಣ ಮಾಡುವ ಮೂಲಕ ನಶಿಸುತ್ತಿರುವ ಕಲೆಯ ಬಗ್ಗೆ ಇಂದಿನ ಯುವ ಪೀಳಿಗಿಗೆ ಅರಿವು ಮೂಡಿಸುವ ಕೆಲಸಮಾಡುತ್ತಿರುವುದು ಶ್ಲಾಘನೀಯ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕುಂದಾಪ್ರ ಕನ್ನಡ ಅಧ್ಯಯನಕ್ಕಾಗಿ ಅಧ್ಯಯನ ಪೀಠವನ್ನು ಸ್ಥಾಪಿಸಿ 1.5ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದ ಅವರು ಕುಂದಾಪ್ರ ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನೂತನ ಸಭಾಭವನ ನಿರ್ಮಿಸುವ ಇರಾದೆ ಹೊಂದಿದ್ದು, ಈಗಾಗಲೇ ಜಾಗ ಗುರುತಿಸುವ ಕೆಲಸವಾಗಿದೆ, ಇಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣಕ್ಕೆ ಅನುದಾನ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದರು.








ಬೈಂದೂರು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಶರತ್ ಕುಮಾರ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ, ಬೈಂದೂರು ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಚಲನಚಿತ್ರ ನಟರಾದ ಶೈನ್ ಶೆಟ್ಟಿ, ತನ್ವೀರಾಮ್, ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ಗೋಕುಲ್ ಶೆಟ್ಟಿ, ರಾಜೇಶ್ ಕಾರಂತ, ಬಾರ್ಕೂರು ದೀಪಕ್ ಶೆಟ್ಟಿ, ಕೃಷ್ಣ ಮದ್ದೋಡಿ, ದೀಪಕ್ ಕುಮಾರ ಶೆಟ್ಟಿ, ರವಿ ಶೆಟ್ಟಿ ಬೈಂದೂರು, ದಿವಾಕರ ಶೆಟ್ಟಿ ನೆಲ್ಯಾಡಿ, ಸುಜ್ಞಾನ ಎಜ್ಯುಕೇಷನ್ ಟ್ರಸ್ಟಿನ ಡಾ. ರಮೇಶ ಶೆಟ್ಟಿ, ಭರತ್ ಶೆಟ್ಟಿ, ಮಂಜಜು ಪೂಜಾರಿ ಸಸಿಹಿತ್ಲು, ಪ್ರಭಾಕರ ಶೆಟಿ ನೆಲ್ಯಾಡಿ, ಸುಗ್ಗಿ ಸುಧಾಕರ ಶೆಟ್ಟಿ, ಪತ್ರಕರ್ತ ಕೆ.ಸಿ. ರಾಜೇಶ್, ಜನಾರ್ದನ ದೇವಾಡಿಗ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.
ಶರತ್‌ಕುಮಾರ ಶೆಟ್ಟಿಪ್ರಾಸ್ತಾವಿಕವಾಗಿ ಮಾತನಾಡಿದರು, ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿ, ಸುನೀಲ್ ಬೈಂದೂರು ವಂದಿಸಿದರು.