ಬೈಂದೂರು: ರತ್ತುಬಾಯಿ ಜನತಾ ಪ್ರೌಢಶಾಲೆ ಬೈಂದೂರಿನಲ್ಲಿ ಇಂಟರಾಕ್ಟ್ ಕ್ಲಬ್ ಪದ ಪ್ರಧಾನ ಸಮಾರಂಭ ಶಾಲಾ ಸಭಾಭವನದಲ್ಲಿ ನಡೆಯಿತು. ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಯುವ ನಾಯಕತ್ವಕ್ಕೆ ಹೊಸ ಹೆಜ್ಜೆ ಇಡುವ ಈ ದಿನ ಸ್ಮರಣೀಯವಾಗಲಿ.ಸೇವಾ ಮನೋಭಾವ ಮತ್ತು ಸಮಾಜಮುಖಿ ಚಿಂತನೆಗಳು ಸದಾ ನಿಮ್ಮಲ್ಲಿ ಬೆಳೆಯಲಿ.ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಿ.ವಿದ್ಯಾರ್ಥಿಗಳ ಪ್ರತಿಭೆ ಮತ್ತು ನಾಯಕತ್ವದ ಗುಣಗಳು ಮತ್ತಷ್ಟು ಬೆಳಗಲಿ.ಸಮಾಜಕ್ಕೆ ಉಪಯುಕ್ತವಾದ ಅನೇಕ ಸೇವಾ ಕಾರ್ಯಗಳು ನಿಮ್ಮಿಂದ ನಡೆಯಲಿ.ಒಗ್ಗಟ್ಟು, ಶಿಸ್ತು ಮತ್ತು ಸೇವೆಯೇ ನಿಮ್ಮ ಯಶಸ್ಸಿನ ದಾರಿಯಾಗಲಿ ಹಾಗೂ ಇಂಟರಾಕ್ಟ್ ಕ್ಲಬ್‌ನ ಕೀರ್ತಿ ಇನ್ನಷ್ಟು ಎತ್ತರಕ್ಕೆ ಏರಲಿ.ನಿಮ್ಮ ಪ್ರತಿಯೊಂದು ಕಾರ್ಯವೂ ಸಮಾಜಕ್ಕೆ ಮಾದರಿಯಾಗಲಿ. ನೂತನ ತಂಡಕ್ಕೆ ಯಶಸ್ಸು, ಸಾಧನೆ ಮತ್ತು ಉಜ್ವಲ ಭವಿಷ್ಯ ದೊರೆಯಲಿ ಎಂದರು ಹಾಗೂ ನಾಯಕತ್ವದ ಗುಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷ ಮಂಜುನಾಥ ಮಹಾಲೆ,ಉದಯ ಆಚಾರ್, ಪ್ರಸಾದ್ ಪ್ರಭು ಶಿರೂರು, ಆನಂದ್ ಮದ್ದೋಡಿ, ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ ಮಾಕೋಡಿ,ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ಚಿಂತನ್ ಪೂಜಾರಿ ಕಾರ್ಯದರ್ಶಿ ಸಾನ್ವಿ ಉಪಸ್ಥಿತರಿದ್ದರು.
ಶಿಕ್ಷಕಿ ಚೈತ್ರ ಯಡ್ತೆರೆ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಗುರುರಾಜ್ ಎಸ್.ವಂದಿಸಿದರು.