ಬೈಂದೂರು: ಬೈಂದೂರು ಕ್ಷೇತ್ರದ ಶಾಸಕರು ಹಾಗೂ ಸಂಸದರು ಕಾರ್ಯಕ್ರಮ ಒಂದರಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.ಕ್ಷೇತ್ರದಲ್ಲಿ ಜನಪರ ಕಾರ್ಯದ ಮೂಲಕ ಪ್ರೀತಿಗಳಿಸಿದ ಸಂಸದರನ್ನು ಪರೋಕ್ಷವಾಗಿ ನಿರ್ಲಕ್ಷ ಮಾಡುತ್ತಿರುವ ಕುರಿತು ಕಾರ್ಯಕ್ರಮ ವೇದಿಕೆಯೊಂದರಲ್ಲೆ ಸಂಸದರು ಅಸಮಾಧಾನ ಹೊರಹಾಕಿದ್ದು ಕಳೆದ ಮೂರ್‍ನಾಲ್ಕು ದಿನಗಳಿಂದ ಶಾಸಕರ ಬೆಂಬಲಿಗರು ಅನಗತ್ಯ ವಿಷಯಾಂತರ ಮಾಡುತ್ತಿರುವುದು ಮತ್ತು ಸೋಶಿಯಲ್ ಮೀಡಿಯಾದಲ್ಲಿ ತೊಡೆತಟ್ಟುತ್ತಿರುವ ಚರ್ಚೆ ನಡೆಯುತ್ತಿದೆ.
ಸಂಸದರ ಮುನಿಸಿಗೆ ಕಾರಣಗಳೇನು: ಪ್ರತಿ ರಾಜಕೀಯ ಪಕ್ಷದಲ್ಲೂ ಹತ್ತಾರು ಬಣ, ನಾಯಕರ ಲಾಬಿ ಇದೆಲ್ಲ ಸಹಜ. ಅದು ಬೈಂದೂರಿಗೂ ಹೊಸದಾಗಿಲ್ಲ.ಆದರೆ ಅವೆಲ್ಲವೂ ಕೂಡ ತೆರೆಮರೆಯಲ್ಲಿದ್ದು ಈಗ ಬಹಿರಂಗಗೊಂಡಿದೆ.ಈ ಹಿಂದೆ ಯಡ್ಯೂರಪ್ಪ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಅವರನ್ನು ಪಟ್ಟದಿಂದ ಕೆಳಗಿಳಿಸಬೇಕು ಎಂದು ಕರಾವಳಿ ಭಾಗದ ಶಾಸಕರೊಬ್ಬರ ನೇತ್ರತ್ವದಲ್ಲಿ ಸಹಿ ಸಂಗ್ರಹಿಸುವಾಗ ಸಂಸದರ ಕ್ಷೇತ್ರದ ಆಪ್ತ ಶಾಸಕರೊಬ್ಬರು ಸಹಿ ಹಾಕಿರುವ ಸುದ್ದಿ ಕೇಳಿ ಬಂದಿತ್ತು. ಈ ಬಾರಿ ಬೈಂದೂರು ಉತ್ಸವದ ಬಳಿಕ ಮತ್ತೊಮ್ಮೆ ಸುದ್ದಿಯಾಗಿದ್ದು ಬೈಂದೂರು ಚಾತುರ್ಮಾಸ.ಬೈಂದೂರು ಭಾಗದಲ್ಲಿ ರಾಜಕೀಯ ಮರೆತು ಹಾಲಿ ಹಾಗೂ ಮಾಜಿ ಶಾಸಕರು ಒಟ್ಟಾಗಿ ಧಾರ್ಮಿಕ ಕಾರ್ಯಕ್ರಮದ ನೇತ್ರತ್ವ ವಹಿಸಿದ್ದು ಬಹಳ ವಿಶೇಷವಾಗಿತ್ತು.ಇದರ ಜೊತೆಗೆ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಎಲ್.ಸಂತೋಷ ಆಗಮಿಸಿದ್ದರು.ಕರಾವಳಿ ಭಾಗದ ಎಲ್ಲಾ ಶಾಸಕರು ಆಗಮಿಸಿದ್ದರು .ಸಂಸತ್ ಕಲಾಪ ಇರುವ ಕಾರಣ ಸಂಸದರು ಆಗಮಿಸಿರಲಿಲ್ಲ.
ಬೈಂದೂರಿನಲ್ಲಿ ನಡೆಯುವ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿ ಬೈಂದೂರು ಸಂಸದರಿಗೆ ಪರೋಕ್ಷವಾಗಿ ನಿರ್ಲಕ್ಷ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಶನಿವಾರ ಚಾತುರ್ಮಾಸ ಕಾರ್ಯಕ್ರಮಕ್ಕೆ ಸಂಸದರು ಆಗಮಿಸಿದ ವೇಳೆ ಬೈಂದೂರು ಭಾಗದ ಕೆಲವು ಮುಖಂಡರ ನಡೆಗಳು ಸಂಸದರನ್ನು ಕೆರಳಿಸಿದೆ.ಮಾತ್ರವಲ್ಲದೆ ಬಹಿರಂಗವಾಗಿಯೇ ಸ್ವಾಮೀಜಿಗಳ ಸಮ್ಮುಖದಲ್ಲೆ ಬೇಸರ ಹೊರಹಾಕಿದ್ದಾರೆ. ರಾಜ್ಯದಲ್ಲಿ ಯಡ್ಯೂರಪ್ಪ ಸರಕಾರ ಮತ್ತು ಅವರ ಕುಟುಂಬ ಮಠ,ಮಂದಿರಗಳಿಗೆ ಅತ್ಯಧಿಕ ಅನುದಾನ ನೀಡಿದೆ. ಪ್ರತಿ ಸ್ವಾಮೀಜಿಗಳ ಧರ್ಮ ಕಾರ್ಯಕ್ಕೆ ಅತ್ಯಂತ ಹೆಚ್ಚು ಗೌರವ ಹಿಂದಿನಿಂದಲೂ ನೀಡಲಾಗುತ್ತಿದೆ.ವಿಶೇಷವಾಗಿ ಬಿಲ್ಲವ ಸಮುದಾಯದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಸೇರಿದಂತೆ ಬೈಂದೂರು ಕ್ಷೇತ್ರದಲ್ಲಿ ಸಮುದಾಯದ ಅಭಿವೃದ್ದಿಗೆ ಒಂದು ಕೋಟಿಗೂ ಅಧಿಕ ಅನುದಾನ ನೀಡಿದೆ.ಮಾತ್ರವಲ್ಲದೆ ಬೈಂದೂರು ಅಭಿವೃದ್ದಿಗೆ ವಿಶೇಷ ಆಧ್ಯತೆ ನೀಡಿದ್ದೇನೆ.ಬೈಂದೂರು ಚಾತುರ್ಮಾಸಕ್ಕೆ ಸ್ವಾಮೀಜಿಗಳು ಖುದ್ದು ಕರೆ ಮಾಡಿದ್ದು ಅವರ ಮೇಲಿನ ವಿಶೇಷ ಗೌರವ ಭಕ್ತಿಯಿಂದ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಆದರೆ ಸಮಿತಿಯ ಅಧ್ಯಕ್ಷರು, ಗೌರವಾಧ್ಯಕ್ಷರು ನನಗೆ ಮಾಹಿತಿ ನೀಡಿಲ್ಲ. ಮಾತ್ರವಲ್ಲದೆ ಹಿಂದೆ ನಾಲ್ಕು ಶಾಸಕರಿದ್ದಾಗಲು ಸಂಸದರ ಬ್ಯಾನರ್‌ಗಳನ್ನು ವಿಶೇಷವಾಗಿ ಹಾಕಲಾಗಿತ್ತು.ಆದರೆ ಈ ಬಾರಿ ಸಂಸದರ ಬ್ಯಾನರ್ ಅಳವಡಿಸಲು ಕೂಡ ಕೆಲವು ಸದಸ್ಯರು ಆಕ್ಷೇಪಣೆ ಮಾಡಿ ಸ್ಥಳ ನೀಡಿಲ್ಲ. ಹೀಗಾಗಿ ಆ ಬ್ಯಾನರ್‌ಗಳನ್ನು ಕೃಷಿಕರಿಗೆ ನೀಡಿದರೆ ಹೊಲಗದ್ದೆಗಾದರು ಅನುಕೂಲವಾಗುತ್ತದೆ ಎಂದು ಬೇಸರಿಸಿದ್ದಾರೆ.
ಸ್ವಾಮೀಜಿಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದು ತಕ್ಷಣ ನಿರ್ಗಮಿಸಿದ್ದಾರೆ.ಶಾಸಕರು ಸಮಾಧಾನಿಸುವ ಪ್ರಯತ್ನ ಕೂಡ ಫಲಕಾರಿಯಾಗಿಲ್ಲ.ಈ ಹಠಾತ್ ನಡೆ ಶಾಸಕರು ಮತ್ತು ಸಂಸದರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ಕಾರ್ಯಕರ್ತರ ಚರ್ಚೆಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ: ಈ ಘಟನೆಯಿಂದ ಶಾಸಕರಿಗೆ ಅವಮಾನವಾಗಿದೆ ಎಂದು ಕೆಲವು ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಅಸಾಮಾಧಾನ ಹೊರಹಾಕಿದ್ದಾರೆ.ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದಾರೆ.ಮಾತ್ರವಲ್ಲದೆ ಬೆಂಗಳೂರಿನಲ್ಲಿ ಕೆಲವರು ಸಮುದಾಯದ ಮುಖಂಡರ ಸಭೆ ನಡೆಸುತ್ತೇವೆ.ಇನ್ನು ಕೆಲವರು ಬೈಂದೂರಿನಲ್ಲಿ ಬಿಲ್ಲವರಿಗೆ ಅವಮಾನವಾಗಿದೆ ಎಂದು ಕೆಲವರು ಆರೋಪಿಸುವುದು ಕೇಳಿ ಬರುತ್ತಿದೆ.ಈ ಬಗ್ಗೆ ಪ್ರತಿಕ್ರಯಿಸಿದ ಬೈಂದೂರು ಬಿಲ್ಲವ ಸಂಘದ ಮುಖಂಡರು ಇದು ಶಾಸಕರು ಮತ್ತು ಸಂಸದರ ವಯಕ್ತಿಕ ವಿಚಾರ.ಬಿಲ್ಲವರು ಸೇರಿದಂತೆ ಯಾವುದೇ ಸಮುದಾಯದ ಕುರಿತು ಅವರು ಮಾತನಾಡಿಲ್ಲ ಬಿಲ್ಲವರಿಗೆ ಅಪಮಾನವಾಗುವಂತ ಯಾವುದೇ ಘಟನೆ ನಡೆದಿಲ್ಲ. ಹೀಗಾಗಿ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ವಾಸ್ತವವಾಗಿ ಸಂಸದ ಬಿ.ವೈ ರಾಘವೇಂದ್ರ ಚಾತುರ್ಮಾಸ ಧಾರ್ಮಿಕ ಕಾರ್ಯಕ್ರಮಕ್ಕೆ ಅತ್ಯಂತ ಗೌರವ ಮತ್ತು ಭಕ್ತಿಯಿಂದ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ ಮತ್ತು ವಿಶೇಷವಾದ ಗೌರವ ಕೂಡ ನೀಡಿದ್ದಾರೆ.ಸಿದ್ದಾಪುರ ಕಾರ್ಯಕ್ರಮ ಮುಗಿಸಿ ಶಾಸಕರ ಜೊತೆ ಕಾರಿನಲ್ಲಿ ಆಗಮಿಸಿದ್ದರು.ಸಂಸದರು ಬರುವ ವೇಳೆ ಸಭಿಕರು ಊಟಕ್ಕೆ ತೆರಳಿದ್ದರು. ಇದಾದ ಬಳಿಕ ಪರಿಸ್ಥಿತಿ ತಿಳಿಯಾಗಿತ್ತು.ರಾಜಕೀಯದಲ್ಲಿ ಇದೆಲ್ಲಾ ಸಹಜ ಆದರೆ ಕೆಲವು ಕಾರ್ಯಕರ್ತರು ಶಾಸಕರ ಪರ ಮತ್ತು ಕೆಲವು ಸಂಸದರ ಪರ ಎನ್ನುವ ಹೇಳಿಕೆಗಳು ಸರಿಯಲ್ಲ . ಸಂಸದರು ಪ್ರಬುದ್ದವಾಗಿ ಮಾತನಾಡಿದ್ದಾರೆ.ಅವರ ನಡೆಯಲ್ಲಿ ಲೋಪವಾಗಿಲ್ಲ ವೀಡಿಯೋ ತುಣುಕಿನಲ್ಲಿ ಸ್ಪಷ್ಟತೆ ಸಿಗುತ್ತದೆ ಎನ್ನುವುದು ಬಂದೂರು ಕೆಲವು ಬಿಜೆಪಿ ಮುಖಂಡರ ಅಭಿಪ್ರಾಯವಾಗಿದೆ.
ಇತ್ತೀಚಿನ ದಿನದಲ್ಲಿ ಬೈಂದೂರು ಬಿಜೆಪಿ ಒಳ ರಾಜಕೀಯ ಕೆಲವು ಕಾರ್ಯಕರ್ತರಿಗೆ ಅತೃಪ್ತಿ ನೀಡಿದರೆ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಹೊಂದಾಣಿಕೆ ಮತ್ತು ಬಿಜೆಪಿಯನ್ನು ವಿರೋಧಿಸುವ ಮನಸ್ಥಿತಿ ಮರೆತಿರುವುದು ನಾಯಕರ ಒಗ್ಗಟ್ಟಿನ ಕೊರತೆ ಬೈಂದೂರು ರಾಜಕಾರಣ ಲೇಟೆಸ್ಟ್ ವಿಷಯವಾಗಿದೆ. ಒಟ್ಟಾರೆ ರಾಜಕೀಯಗಳು ಹೇಗೆ ಇರಲಿ ವಯಕ್ತಿಕ ಮರೆತು ಬೈಂದೂರಿನ ಭವಿಷ್ಯದ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾಗಿದೆ.ವ್ಯವಹಾರ, ಉದ್ದಿಮೆ ವ್ಯವಸ್ಥೆಗಳಲ್ಲಿ ಪಕ್ಷಗಳಲ್ಲಿ ಅದರ ಸಿದ್ದಾಂತಗಳಿಗಾದರು ಮನ್ನಣೆ ನೀಡಿ ಬಹುದೊಡ್ಡ ಬೈಂದೂರು ಕ್ಷೇತ್ರದಲ್ಲಿ ಒಂದಿಷ್ಟು ಬದಲಾವಣೆಗಳಾಗಬೇಕಾಗಿದೆ ಎನ್ನುವುದು ಎರಡು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ..
ವರದಿ/ ವೆಬ್ಬೇಶ್ ಬೈಂದೂರು