ಬೈಂದೂರು: ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಡವಿನಕೋಣೆ ಇದರ ವಾರ್ಷಿಕೋತ್ಸವ ಸಮಾರಂಭ ಶ್ರೀ ಗಣೇಶ ಯುವಕ ಮಿತ್ರ ಮಂಡಳಿ ಚಾರೋಡಿ ಮೇಸ್ತ ಸಮಾಜ ಹಡವಿನ ಕೋಣೆ ಸಭಾಭವನದಲ್ಲಿ ನಡೆಯಿತು.
ತಾಲೂಕು ಯೋಜನಾಧಿಕಾರಿ ಸಂಜಯ ನಾಯ್ಕಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜದ ಸುರಕ್ಷತೆಗಾಗಿ ನಿಮ್ಮ ಸೇವೆ ಸದಾ ಶ್ಲಾಘನೀಯ.ಧೈರ್ಯ,ಸೇವೆ ಮತ್ತು ಸಮರ್ಪಣೆಯೇ ನಿಮ್ಮ ಗುರುತು.ನಿಮ್ಮ ತಂಡ ಇನ್ನಷ್ಟು ಯಶಸ್ಸು ಹಾಗೂ ಸಾಧನೆಗಳನ್ನುಗಳಿಸಲಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಶಿರೂರು ಒಕ್ಕೂಟದ ಅಧ್ಯಕ್ಷ ಗಿರೀಶ್ ಮೇಸ್ತ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಸಂತೋಷ ಕುಮಾರ್, ಮಾಜಿ ಶೌರ್ಯ ಘಟಕದ ಅಧ್ಯಕ್ಷ ಪ್ರಕಾಶ್ ಬಿ, ಚಂದ್ರಶೇಖರ್ ಮೇಸ್ತ, ಸಂಪನ್ಮೂಲ ವ್ಯಕ್ತಿ ಸಿ. ಆರ್ .ಪಿ ಕಂಬದಕೋಣೆ ರಾಮನಾಥ ಪಿ.ಮೇಸ್ತ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೌರ್ಯ ಘಟಕದ ಸದಸ್ಯರಾದ ಚಂದ್ರಶೇಖರ ಮೇಸ್ತ ರವರನ್ನು ಸಮ್ಮಾನಿಸಲಾಯಿತು ಹಾಗೂ ಜನಜಾಗೃತಿ ವೇದಿಕೆ ಸದಸ್ಯರಾದ ಪ್ರಸಾದ ಪ್ರಭು ಶೌರ್ಯ ಘಟಕದ ಕೆಲಸಕ್ಕೆ ಸಹಾಯ ಆಗುವಂತಹ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.

ಅಣ್ಣಪ್ಪ ಮೇಸ್ತ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಘಟಕದ ಸಂಯೋಜಕಿ ಗೀತಾ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.
ವಲಯದ ಮೇಲ್ವಿಚಾರಕಿ ತನುಜಾ ಕಾರ್ಯಕ್ರಮ ನಿರೂಪಿಸಿದರು.ರತ್ನಾಕರ ಮೇಸ್ತ ವಂದಿಸಿದರು.