ಶಿರೂರು: ಉಡುಪಿ ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯತ್‌ ವ್ಯಾಪ್ತಿ ಹೊಂದಿರುವ ಶಿರೂರಿನಲ್ಲಿ ಎಕ್ಸ್‌ಪ್ರೆಸ್‌ ರೈಲುಗಳನ್ನು ನಿಲುಗಡೆ ಮಾಡಬೇಕು ಎನ್ನುವ ಕೂಗು ಎದ್ದಿದೆ.ಬೈದೂರು ತಾಲೂಕು ಕೇಂದ್ರವಾಗಿದ್ದು ತಾಲೂಕು ಕೇಂದ್ರದ ಜೊತೆ ಜೊತೆಗೆ ಇತರ ನಿಲ್ದಾಣಗಳು ಪ್ರಗತಿಯಾದಾಗ ಕ್ಷೇತ್ರ ಇನ್ನಷ್ಟುಅಭಿವೃದ್ದಿಯಾಗುತ್ತದೆ.ಇತರ ನಿಲ್ದಾಣಗಳಿಗೆ ಹೋಲಿಸಿದರೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಅತ್ಯಂತ ಸಮೀಪದ ನಿಲ್ದಾಣವೆಂದರೆ ಶಿರೂರು ರೈಲ್ವೆ ನಿಲ್ದಾಣವಾಗಿದೆ.ಹೀಗಾಗಿ ಶಿರೂರಿನಲ್ಲಿ ಕೇವಲ ಲೋಕಲ್‌ ರೈಲು ಮಾತ್ರ ನಿಲುಗಡೆಯಾಗುತ್ತದೆ.ಹೀಗಾಗಿ ಪ್ರತಿದಿನ ಬೆಂಗಳೂರಿಗೆ ತೆರಳುವ ರೈಲುಗಳು ಸೇರಿದಂತೆ ಶಿರೂರಿನಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ನೀಡಬೇಕು ಎಂದು ಶಿರೂರಿನ ಜನತೆ ಪರವಾಗಿ ಶಿರೂರು ಅಸೋಸಿಯೇಷನ್‌ ಆಗ್ರಹಿಸಿದೆ.

ಸಂಸದರಿಗೆ ಮನವಿ: ಮೊದಲ ಹಂತದಲ್ಲಿ ಸಂಸದರಿಗೆ ಹಾಗೂ ಇತರ ಜನಪ್ರತಿನಿಧಿಗಳಿಗೆ ಮನವಿ ನೀಡುವ ಮೂಲಕ ಜನರ ದ್ವನಿಯನ್ನು ತಲುಪಿಸುವುದು ಬಳಿಕ ರೈಲ್ವೆ ಅಧಿಕಾರಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಸಚಿವರನ್ನು ಬೇಟಿ ಮಾಡುವ ಸಿದ್ದತೆ ನಡೆಯುತ್ತಿದೆ.ಶಿರೂರಿನಲ್ಲಿ ಎಕ್ಸ್‌ಪ್ರೆಸ್‌ ರೈಲುಗಳು ನಿಲುಗಡೆಯಾದರೆ ಶಿರೂರಿನಿಂದ ಸರ್ಪನಕಟ್ಟೆಯವರೆಗೆ ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿಭಾಗಗಳ ಜನರಿಗೆ ಸಾಕಷ್ಟುಅನುಕೂಲವಾಗಲಿದೆ.ಹೀಗಾಗಿ ಶಿರೂರಿನಲ್ಲಿ ಎಕ್ಸ್‌ಪ್ರೆಸ್‌ ರೈಲುಗಳು ನಿಲುಗಡೆಯಾಗಬೇಕು ಎನ್ನುವುದು ಇಲ್ಲಿನ ಜನರ ಒಕ್ಕೊರಲಿನ ಆಗ್ರಹವಾಗಿದೆ.

ವರದಿ/ಗಿರಿ ಶಿರೂರು

Leave a Reply

Your email address will not be published. Required fields are marked *

four × 2 =