ಉಪ್ಪುಂದ; ಉಪ್ಪುಂದ ವರಲಕ್ಷೀ ಚಾರಿಟೇಬಲ್ ಟ್ರಸ್ಟ ವತಿಯಿಂದ ದತ್ತು ಸ್ವೀಕರಿಸಲ್ಪಟ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷರ ಮುಂಜುನಾಥ ಎಸ್. ಸೇವಾ ನಿವೃತಿಗೊಂಡಿದ್ದು ಅವರಿಗೆ ಬಿಳ್ಕೋಡುಗೆ ಮತ್ತು ಅಭಿನಂದನಾ ಸಮಾರಂಭ ಜು.31ರಂದು ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಸಭಾಭವನದಲ್ಲಿ ನಡೆಯಿತು.
ಉದ್ಯಮಿ ಡಾ. ಗೋವಿಂದಬಾಬು ಪೂಜಾರಿ ಮಾತನಾಡಿ, ಮುಖ್ಯಶಿಕ್ಷಕ ಮಂಜುನಾಥ ಇವರು ಕೇವಲ 74ಮಕ್ಕಳು ಇರುವ ಶಾಲೆಗೆ ಬಂದು ತನ್ನ ಪರಿಶ್ರಮದಿಂದ ವಿವಿಧ ಸವಾಲುಗಳನ್ನು ಎದುರಿಸಿ, ಎಲ್.ಕೆ.ಜಿ., ಯುಕೆಜಿ ತರಗತಿಗಳನ್ನು ಪ್ರಾರಂಭಿಸಿ,
ಶಾಲೆಗೆ ವಿವಿಧ ಮೂಲ ಸೌಕರ್ಯಗಳನ್ನು ದೊರಕಿಸಿಕೊಟ್ಟು ಪ್ರಸ್ತುತ 185 ವಿದ್ಯಾರ್ಥಿಗಳು ಇರವಂತೆ ಮಾಡಿರುವುದು ಮುಖ್ಯಶಿಕ್ಷಕರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ ಅವರ ಈ ಸಾಧನೆಯು ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್, ಶಾಲಾಬಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನ, ಶಾಲಾ ಶಿಕ್ಷಕರ ಬಳಗ, ವಿದ್ಯಾರ್ಥಿಗಳ ವತಿಯಿಂದ ಸೇವಾ ನಿವೃತ್ತರಾದ ಮುಖ್ಯೋಪಾಧ್ಯಾಯ ಮುಂಜುನಾಥ ಎಸ್. ಅವರನ್ನು ಅಭಿನಂದಿಸಿ, ಸಮ್ಮಾನಿಸಲಾಯಿತು.

ಹಿರಿಯರಾದ ವಿಶ್ವೇಶ್ವರ ಅಡಿಗ ಮಾತನಾಡಿದರು. ಶಾಲಾ ಎಸ್.ಡಿ.ಎಂ.ಸಿ., ಅಧ್ಯಕ್ಷ ರಮೇಶ ವಿ. ದೇವಾಡಿಗ ಶಾಲೆಯ ಅಭಿವೃದ್ಧಿಗೆ ಮುಖ್ಯಶಿಕ್ಷಕರ ಕೊಡುಗೆ, ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.

ಸೇವಾ ನಿವೃತ್ತರಾದ ಮುಖ್ಯಶಿಕ್ಷಕ ಮಂಜುನಾಥ ಎಸ್. ಅಭಿನಂದನೆ ಸ್ವೀಕರಿಸಿ, ನನ್ನೂರಿನ ಶಾಲೆಯನ್ನು ಉಳಿಸಿ, ಬೆಳಸಬೇಕು ಎನ್ನುವ ಕನಸ್ಸಿನೊಂದಿಗೆ ಹೆಜ್ಜೆಹಾಕಿದ್ದು, ಎಲ್ಲರ ಸಹಕಾರ ದೊರಕಿದೆ. ಈ ಸಾಧನೆಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಕೂಡಾ ಶಾಲಾ ಅಭಿವೃಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭ ಶ್ರೀಧರ ಬಿಜೂರು, ರಾಜ್ಯ ಸರಕಾರಿ ನೌಕರರ ಸಂಘ ಬೈಂದೂರು ತಾ ಅಧ್ಯಕ್ಷ ಶೇಖರ ಪೂಜಾರಿ, ಜಯರಾಮ ಶೆಟ್ಟಿ, ರಾಜೇಂದ್ರ ಎಸ್. ನಿವೃತ್ತ ಮುಖ್ಯಶಿಕ್ಷಕ ಗಿರೀಶ ಶ್ಯಾನುಬಾಗ್, ಮೂರ್ಗೋಳಿಹಕ್ಲು ಶ್ರೀ ನಂದಿಕೆಶ್ವರ ದೈವಸ್ಥಾನದ ಕಾರ್ಯದರ್ಶಿ ಮಂಜುನಾಥ ದೇವಾಡಿಗ, ಗಂಗಾಧರ ದೇವಾಡಿಗ, ಸಮಾಜ ಸೇವಕ ಸುಬ್ರಹ್ಮಣ್ಯ ಬಿಜೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದೀಶ್ ದೇವಾಡಿಗ, ನಿಯೋಜಿತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ, ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ ವ್ಯವಸ್ಥಾಪಕ ನಾಗರಾಜ ಪಿ.ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.

ನಿಯೋಜಿತ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಪರಿಚಯ ಪತ್ರ ವಾಚಿಸಿದರು. ಶ್ರೀ ನಂದಿಕೇಶ್ವರ ದೈವಸ್ಥಾನ ಕಾರ್ಯದರ್ಶಿ ಮಂಜುನಾಥ ದೇವಾಡಿಗ ಸ್ವಾಗತಿಸಿದರು. ಕೃಷ್ಣ ದೇವಾಡಿಗ ವಂದಿಸಿದರು. ಶಿಕ್ಷಕ ಕೇಶವ ನಾಯ್ಕ್ ನಿರೂಪಿಸಿದರು.

Leave a Reply

Your email address will not be published. Required fields are marked *

two × 4 =