ಬೈಂದೂರು: ಮೊಗವೀರ ಯುವ ಸಂಘಟನೆ(ರಿ.)ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ ಇದರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಬಂಟರ ಭವನ ಯಡ್ತರೆಯಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವನ್ನು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ರವೀಶ್ ಕೊರವಡಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿ ಮೊಗವೀರ ಯುವ ಸಂಘಟನೆಯ ಶ್ಲಾಘನೀಯ ಕಾರ್ಯಗಳ ಮೂಲಕ ಮಾದರಿ ಸಂಘಟನೆಯಾಗಿ ಬೆಳೆದು ನಿಂತಿದೆ.ಸಂಘಟನೆ ಮತ್ತು ಸಮುದಾಯದ ಹಿತದೃಷ್ಟಿಯಿಂದ ಬೈಂದೂರು ಭಾಗದಲ್ಲಿ ಯುವ ಸಂಘಟನೆ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸೇವೆ ನೀಡುತ್ತಿದೆ.ಸಮಾಜದಲ್ಲಿ ಅಶಕ್ತರ ಹಾಗೂ ಆರೋಗ್ಯ,ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯ ಸೇವೆ ನೀಡಿದಾಗ ಅವರ ಭವಿಷ್ಯ ರೂಪಿಸಿದ ಸಂತೃಪ್ತಿ ದೊರೆಯುತ್ತದೆ.ಹೀಗಾಗಿ ನೂತನ ಪದಾಧಿಕಾರಿಗಳ ತಂಡ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುರುತಿಸುಕೊಳ್ಳುವಂತಾಗಲಿ ಎಂದರು.
ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ನೂತನ ಅಧ್ಯಕ್ಷ ಸೋಮಶೇಖರ ಜಿ.ಕಸ್ಟಮ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನಿಕಟಪೂರ್ವಾಧ್ಯಕ್ಷ ಸೋಮಶೇಖರ ಜಿ.ಕಸ್ಟಮ್ ಅವರು ನಿಯೋಜಿತ ಅಧ್ಯಕ್ಷರಾದ ಹರೀಶ್ ಮಯ್ಯಾಡಿ ಯವರಿಗೆ ಅಽಕಾರ ಹಸ್ತಾಂತರಿಸಿದರು ಹಾಗೂ ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಮೊಗವೀರ ಮಹಾಜನ ಸಂಘದ ಬಗ್ವಾಡಿ ಹೋಬಳಿ ಘಟಕದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ರಾಮ.ಎಚ್.ಮೊಗವೀರ ಕಳವಾಡಿ,ಜಿಲ್ಲಾ ಸಂಘದ ನಿಕಟಪೂರ್ವಾಧ್ಯಕ್ಷ ಜಯಂತ್ ಅಮೀನ್ ಕೋಡಿ,ರಾಜೇಂದ್ರ ಸುವರ್ಣ, ಮತ್ಸೋಧ್ಯಮಿ ರಾಮ ಎನ್.ಅಳ್ವೆಗದ್ದೆ,ಜಿ.ಪಂ ಮಾಜಿ ಸದಸ್ಯ ಮದನ್ ಕುಮಾರ್,ತಾ.ಪಂ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್,ಬ್ರಹ್ಮಾವರ ಜೀವವಿಮಾ ನಿಗಮದ ರಾಮ ಗರ್ಜಿನಿತ್ಲು, ಯೋಗೀಶ್ ಕಂಬದಕೋಣೆ,ಶಿರೂರು ಕೆನರಾ ಬ್ಯಾಂಕ್ ಉದ್ಯೋಗಿ ಸುನೀಲ್ ಕೆ,ಉಪ್ಪುಂದ ಗ್ರಾ.ಪಂ ಮಾಜಿ ಅಧ್ಯಕ್ಷ ಜಗನ್ನಾಥ ಕರ್ಕಿಕಳಿ,ಮೊಗವೀರ ಯುವ ಸಂಘಟನೆ ನಿಕಟಪೂರ್ವಾಧ್ಯಕ್ಷ ರವಿರಾಜ್ ಚಂದನ್ ಕಳವಾಡಿ, ನಿಯೋಜಿತ ಕೋಶಾಧಿಕಾರಿ ಚಂದ್ರ ತೊಂಡೆಮಕ್ಕಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರ ತೋಳಾರ್,ಕಾರ್ಯದರ್ಶಿ ಚಂದ್ರ ಸೂರ್ಕುಂದ ಉಪಸ್ಥಿತರಿದ್ದರು.








ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು,ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಮೊಗವೀರ ಯುವ ಸಂಘಟನೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಸಾವಿತ್ರಿ ಕಳವಾಡಿ ಪ್ರಾರ್ಥಿಸಿದರು.ಮೆಸ್ಕಾಂ ಇಲಾಖೆಯ ಕೃಷ್ಣ ಮೊಗವೀರ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಜಿಲ್ಲಾ ಸಂಘದ ಉಪಾಧ್ಯಕ್ಷ ಪಾಂಡುರಂಗ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ನಾಗರಾಜ ಕೆ.ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು