ಶಿರೂರು: ಶಿರೂರು ಹಿರಿಯ ಸಂಘದ ಕಾರ್ಯಕರ್ತ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಉಪಾಧ್ಯಕ್ಷ,ಉದ್ಯಮಿ ಸುಭಾಷ್ ಪ್ರಭು (63) ಅಲ್ಪಕಾಲದ ಅಸೌಖ್ಯದಿಂದ ಆ.1 ರಂದು ಶನಿವಾರ ನಿಧನರಾದರು.ಶಿರೂರಿನ ವಿವಿಧ ಸಂಘ ಸಂಸ್ಥೆ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಚಿರಪರಿಚಿತರಾದ ಇವರು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದರು.ಮೃತರು ಪತ್ನಿ,ಎರಡು ಹೆಣ್ಣು ಹಾಗೂ ಒಂದು ಗಂಡು,ಕುಟುಂಬದವರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.ಇವರ ನಿಧನಕ್ಕೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.