ಬೈಂದೂರು: ಜೆಸಿಐ ಘಟಕ ಶಿರೂರು, ಕ್ಲೀನ್ ಕಿನಾರ ಹಾಗೂ ಎನ್.ಸಿ.ಇ.ಎಫ್ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ನೆಟ್ಟ ಗಿಡಗಳ ಸಂರಕ್ಷಣಾ ಕಾರ್ಯಕ್ರಮ ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕ್ಲೀನ್ ಕಿನಾರಾ ಮೂಲಕ ಬೈಂದೂರು ಪರಿಸರದಲ್ಲಿ ನಿರಂತರ ಜನಜಾಗ್ರತಿ ಮೂಡಿಸುತ್ತಿರುವ ಕ್ಲೀನ್ ಕಿನಾರ ಸಂಚಾಲಕ ರಾಘವೇಂದ್ರ ಪಡುವರಿ ಯವರನ್ನು ಜೆಸಿಐ ಶಿರೂರು ಘಟಕ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿರೂರು ಜಸಿಐ ಅಧ್ಯಕ್ಷ ವಿನೋದ ಮೇಸ್ತ, ಜೆಜೆಸಿ ಅಧ್ಯಕ್ಷ ದೇವೇಂದ್ರ ಪಾಟೀಲ್, ನಿಕಟಪೂರ್ವಾಧ್ಯಕ್ಷ ಗಿರೀಶ್ ಮೇಸ್ತ, ನಾಗೇಶ್ ಕೆ, ನಾಗೇಂದ್ರ ಪ್ರಭು, ಜೆಸಿರೇಟ್ ಅಧ್ಯಕ್ಷೆ ಲಕ್ಷ್ಮಿ ನಾಗೇಶ್ ಕೆ,ಬೈಂದೂರು ಕ್ಲೀನ್ ಕಿನಾರ ತಂಡದ ಸದಸ್ಯರು ಹಾಗೂ ಜೆಸಿಐ ಶಿರೂರು ಘಟಕದ ಸದಸ್ಯರು ಹಾಜರಿದ್ದರು