ಬೈಂದೂರು: ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಅಮಿಟೆಡ್ ಬೈಂದೂರು ಶಾಖೆ ಇದರ ಸಾಮಾಜಿಕ ಆರ್ಥಿಕ ಅಭಿವೃದ್ದಿ ಕಾರ್ಯಗಾರ ಜ್ಞಾನದಿಂದ ಉತ್ತಮ ಜೀವನ ನಿರ್ಮಾಣ,ಹಣಕಾಸು ಸಾಕ್ಷರತೆ ಹಾಗೂ ಕ್ರೆಡಿಟ್ ಶಿಸ್ತು ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ ಕಾರ್ಯಕ್ರಮ ಮಹಾಸತಿ ಸಭಾಭವನ  ವತ್ತಿನಕಟ್ಟೆ ಬೈಂದೂರಿನಲ್ಲಿ ನಡೆಯಿತು.

ಬೈಂದೂರು ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಶಿವಕುಮಾರ ಬಿ.ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಉಳಿತಾಯ ಮಾಡುವ ಅಭ್ಯಾಸವೇ ಆರ್ಥಿಕ ಭದ್ರತೆಗೆ ಮೊದಲ ಹೆಜ್ಜೆ. ಅಗತ್ಯಕ್ಕೆ ತಕ್ಕಂತೆ ಮಾತ್ರ ಖರ್ಚು ಮಾಡಿ ಅನಗತ್ಯ ಸಾಲವನ್ನು ತಪ್ಪಿಸಿ.ಹಣವನ್ನು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಯೋಜನೆಗಳಲ್ಲಿ ಹೂಡಿಕೆ ಮಾಡಿ.ಹಣಕಾಸಿನ ಜ್ಞಾನವು ಉತ್ತಮ ಭವಿಷ್ಯ ಮತ್ತು ಸ್ವಾವಲಂಬಿ ಜೀವನಕ್ಕೆ ಅಡಿಪಾಯವಾಗಿದೆ. ಹಣಕಾಸು ಸಾಕ್ಷರತೆ ವ್ಯಕ್ತಿಗೆ ಹಣವನ್ನು ಸರಿಯಾಗಿ ನಿರ್ವಹಿಸುವ ಜ್ಞಾನ ನೀಡುತ್ತದೆ.ಕ್ರೆಡಿಟ್ ಶಿಸ್ತು ಉತ್ತಮ ಸಾಲದ ಇತಿಹಾಸ ಹಾಗೂ ಆರ್ಥಿಕ ವಿಶ್ವಾಸಾರ್ಹತೆಯನ್ನು ಬೆಳೆಸುತ್ತದೆ.ಅಪರಿಚಿತ ಲಿಂಕ್‌ಗಳು ಹಾಗೂ ನಕಲಿ ವೆಬ್‌ಸೈಟ್‌ಗಳಿಂದ ದೂರವಿರಬೇಕು.ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಬರುವ ಕರೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.ಯಾವುದೇ ಹಣಕಾಸು ವ್ಯವಹಾರ ಮಾಡುವ ಮೊದಲು ಮಾಹಿತಿಯನ್ನು ದೃಢೀಕರಿಸಬೇಕು.ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಬೇಕು.ಹಣಕಾಸಿನ ಜಾಗೃತಿ ಮತ್ತು ಎಚ್ಚರಿಕೆ ಡಿಜಿಟಲ್ ವಂಚನೆಗಳನ್ನು ತಡೆಯುವ ಪ್ರಮುಖ ಮಾರ್ಗವಾಗಿದೆ ಎಂದರು.

ಚಿಕ್ಕಮಗಳೂರು ಪ್ರಾದೇಶಿಕ ವ್ಯವಸ್ಥಾಪಕ ಗಿರೀಶ್ ಎ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್.ಜಿ,ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ವಿಶ್ವನಾಥ ಮರವಂತೆ,ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಬೊಮ್ಮಯ್ಯ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗ್ರಾಮೀಣ ಕೂಟ ಮತ್ತು ಸಿ.ಎ.ಐ,ಎಫ್ ನ ಸಿ.ಎಸ್.ಆರ್ ಹಿತಚಿಂತನೆಗಳ ಪರಿಚಯದ ನಂತರ ಸಂಸ್ಥೆಯ ಕಾರ್ಪೊರೇಟ್ ವಿಡಿಯೋ ಪ್ರದರ್ಶನ ಮತ್ತು ಆಕರ್ಷಕ ಹಣಕಾಸು ಜ್ಞಾನ ತರಬೇತಿ ಜರುಗಿತು.

ವಲಯಾಧಿಕಾರಿ ಶಿವಣ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಬೈಂದೂರು ಶಾಖಾ ವ್ಯವಸ್ಥಾಪಕ ಮುಬಾರಕ್ ವಂದಿಸಿದರು.

 

 

Leave a Reply

Your email address will not be published. Required fields are marked *

1 + 2 =