ಬೈಂದೂರು; ಧರ್ಮದ ಅಂತರಾಳದಲ್ಲಿ ಸುಖಃವಿದೆ.ಚಾತುರ್ಮಾಸದಿಂದ ಶರೀರ ಮತ್ತು ಮನೋಸುದ್ದಿ ದೊರೆಯಲಿದೆ.ಶರೀರದ ಸದ್ಬಳಕೆಯ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ.ಜನರಿಗೆ ಧಾರ್ಮಿಕ ಪ್ರೇರಣೆ ನೀಡಿ, ಭಕ್ತಿಯ ಮಾರ್ಗದೆಡೆಗೆ ಸೆಳೆದು ಧರ್ಮದ ಅಂತರಾಳದ ಸಂತೋಷವನ್ನುಂಟುಮಾಡುವ ಪ್ರಮುಖ ಹೆಜ್ಜೆ ಎಂದು ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು ಅವರು ಜು.29ರಂದು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆದ ಬೈಂದೂರು ಚಾತುರ್ಮಾಸ್ಯ ವ್ರತಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿ ಭಾರತೀಯ ಸಂಸ್ಕ್ರತಿಯಲ್ಲಿ ಗುರು ಪರಂಪರೆ ಶ್ರೇಷ್ಟತೆ ಪಡೆದಿದೆ.ಆರೋಗ್ಯಕರ ಸಮಾಜ ಮತ್ತು ಸಾಮರಸ್ಯದ ಬದುಕಿನಲ್ಲಿ ಚಾತುರ್ಮಾಸ ಸಾತ್ವಿಕತೆಯ ಪ್ರಭಾವ ಬೀಳಲಿದೆ.ಅಜ್ಞಾನದಿಂದ  ಜೀವನದ ಜ್ಞಾನ ದೃಷ್ಟಿಕೊಡುವವರೇ  ಗುರು ಎಂದು ಕರೆಸಿಕೊಳ್ಳುತ್ತಾರೆ.ವೇಗದ ಜಗತ್ತಿನಲ್ಲಿ ಸ್ವಯಂವನ್ನು ಕಳೆದುಕೊಳ್ಳುತ್ತಿರುವ ಜನರಿಗೆ ಜ್ಞಾನದ ಹನಿಯನ್ನು ಪಸರಿಸುವ ಕಾರ್ಯ ಈ ಚಾತುರ್ಮಾಸ್ಯದಲ್ಲಿ ನಡೆಯುತ್ತದೆ. ಸ್ವಾಮೀಜಿಯವರ ತತ್ವಾದರ್ಶಗಳ ಪಾಲನೆಯಿಂದ ಬೌದ್ಧಿಕ ಜಗತ್ತಿನ ಪರಿಚಯ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಚಾತುರ್ಮಾಸ್ಯ ವ್ರತಾಚರಣೆ ಸಮಿತಿಯ ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ, ಅಧ್ಯಕ್ಷ ಗುರುರಾಜ್ ಗಂಟಿಹೊಳೆ, ಮಾಜಿ ಸಚಿವರಾದ ಮಂಕಾಳ ಎಸ್. ವೈದ್ಯ, ಶಿವಾನಂದ ನಾಯ್ಕ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಯಶ್‌ಪಾಲ್ ಸುವರ್ಣ, ಡಾ. ವೈ. ಭರತ್ ಕುಮಾ‌ರ್ ಶೆಟ್ಟಿ, ಹರೀಶ್ ಪೂಂಜಾ, ಮಾಜಿ ಸಂಸದ ನಳೀನ್ ಕುಮಾರ್ ಶೆಟ್ಟಿ, ಮಾಜಿ ಶಾಸಕರಾದ ಸುನಿಲ್ ನಾಯ್ಕ್ ಭಟ್ಕಳ್, ಸಂಜೀವ ಮಠದೂರು, ಪ್ರಖರಾದ ಎಸ್. ರಾಜು ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ದಿನೇಶ ಅಮಿನ್ ಕುಂದಾಪುರ, ಉದ್ಯಮಿ ದಯಾನಂದ ಬಿ ಬೊಂಟ್ರ, ಸೂರಜ್ ನಾಯ್ಕ್ ಸೋನಿ, ಈಶ್ವರ್ ನಾಯ್ಕ ಮುರ್ಡೇಶ್ವರ, ಹರಿಕೃಷ್ಣ ಬಂಟ್ವಾಳ, ಹೆಚ್.ಆರ್.ನಾಯ್ಕ್, ಚಿತ್ತರಂಜನ್, ಗುರುರಾಜ್ ಪಂಜು ಪೂಜಾರಿ, ಗಂಗಾಧರ ಬೆಂಗಳೂರು, ತಮ್ಮೇ ಗೌಡ ಬೆಂಗಳೂರು, ವಿಕಾಸ ಪುತ್ತೂರು, ಕಿರಣ್ ಕುಮಾರ್ ಕೋಡಿಕಲ್, ಕೃಷ್ಣಪ್ರಸಾದ ಅಡ್ಯಂತಾಯ, ಅನಿತಾ ಮರವಂತೆ, ಮೊದಲಾದವರು ಉಪಸ್ಥಿತರಿದ್ದರು.
ಕೇಶವ ಬಂಗೇರ ಸ್ವಾಗತಿಸಿದರು.ಪತ್ರಕರ್ತ ಕೆ.ಸಿ.ರಾಜೇಶ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಪ್ರಣತ್ ಆರ್.ಗಾಣಿಗ ವಂದಿಸಿದರು.

ವರದಿ/ಗಿರಿ ಶಿರೂರು

ಚಿತ್ರ: ಶಬರಿ ಸ್ಟುಡಿಯೋ ಯಡ್ತರೆ

Leave a Reply

Your email address will not be published. Required fields are marked *

four + one =