ಬೈಂದೂರು: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗ ಸಂಸ್ಥೆಯಾದ ಕತಾರ್‌ನ ಪ್ರತಿಷ್ಠಿತ ಭಾರತೀಯ ಪ್ರವಾಸಿ ಸಂಘಟನೆ ‘ಕರ್ನಾಟಕ ಸಂಘ ಕತಾರ್’ (ಕೆಎಸ್‍ಕ್ಯೂ), ಇತ್ತೀಚೆಗೆ ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ನಡೆಯಿತು.

ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಕಾರ್ಯಕ್ರಮ ಉದ್ಘಾಟಿಸಿದರು.

ಕತಾರ್ ದೇಶದ ಭಾರತೀಯ ರಾಯಭಾರಿ ವಿಪುಲ್, ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ (ಡಿಸಿಎಂ) ಸಂದೀಪ್ ಕುಮಾರ್ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಧ್ಯಕ್ಷ ಎ.ಪಿ. ಮಣಿಕಂಠನ್, ಕತಾರ್ ಆಟೋ ಮ್ಯೂಸಿಯಂನ ಆಡಳಿತ ವಿಭಾಗದ ಉಪ ನಿರ್ದೇಶಕಿ ಮಿಸ್ ಫಾತಿಮಾ ಅಲ್ ಮಾದೀದ್ ,ಕತಾರ್ ಇಂಧನ ಕ್ಷೇತ್ರದ ಹಿರಿಯ ಪೆಟ್ರೋಲಿಯಂ ಎಂಜಿನಿಯರ್ ಖಾಲಿದ್ ಅಲ್ ಫಕ್ರೂ, ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು,ಉಪಾಧ್ಯಕ್ಷ ಅನಿಲ್ ಭಾಸಗಿ, ಕೆಎಸ್‍ಕ್ಯೂ ಖಜಾಂಚಿ ಮಂಜೋತ್ ಸುರೇಶ್ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *

8 − three =