ಶಿರೂರು: ಜೆಸಿಐ ಶಿರೂರು ಘಟಕ ಇದರ ವತಿಯಿಂದ ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತ ಶಿರೂರು ಪರಿಸರದ 10ಕ್ಕೂ ಅಧಿಕ ವೈದ್ಯರಿಗೆ ಗಿಡ ನೀಡುವ ಮೂಲಕ ವೈದ್ಯರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು.
ಶಿರೂರು ಜೆಸಿಐ ಅಧ್ಯಕ್ಷ ವಿನೋದ ಮೇಸ್ತ, ಕಾರ್ಯದರ್ಶಿ ಪವನ್ ಪೂಜಾರಿ, ಜೇಸಿರೇಟ್ ಅಧ್ಯಕ್ಷೆ ಜ್ಯೋತಿ ಪೂಜಾರಿ ಮತ್ತು ಶಿರೂರು ಜೆಸಿಐ ಸದಸ್ಯರು ಹಾಜರಿದ್ದರು.
