ಬೈಂದೂರು: ಶ್ರೀ ಕ್ರಿಕೆಟರ್ಸ ಅಳ್ವೆಗದ್ದೆ ಶಿರೂರು ಇದರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ಮಹಾಗಣಪತಿ ಟ್ರೋಪಿ -2026 ಮೊಗವೀರ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟದಲ್ಲಿ ನಾಗಶ್ರೀ ಮುಂಡಳ್ಳಿ ತಂಡ ಚಾಂಪಿಯನ್ ಆಗಿ ಮೂಡಿಬಂದರು.ಶ್ರೀ ದುರ್ಗಾ ಅಳ್ವೆಕೋಡಿ ತಂಡ ರನ್ನರ್ ಆಫ್ ಪ್ರಶಸ್ತಿ ಪಡೆದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ ಎನ್.ಅಳ್ವೆಗದ್ದೆ,ಮತ್ಸೋಧ್ಯಮಿ ತಿಮ್ಮಪ್ಪ ಮೊಗೇರ್ ಅಳ್ವೆಗದ್ದೆ,ಉದ್ಯಮಿ ಪ್ರಶಾಂತ ಮೊಗೇರ್ ಅಳ್ವೆಗದ್ದೆ,ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ತುಳಸಿದಾಸ್ ಮೊಗೇರ್,ಅಕ್ಷಯ ನಾರಾಯಣ ಶ್ರೀನಿವಾಸ,ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕ ಸುರೇಶ ಮೊಗೇರ್,ವೆಂಕಟೇಶ ಮೊಗೇರ್,ಶ್ರೀನಿವಾಸ ಮೊಗೇರ್,ಸೌಮ್ಯ ಟ್ರಾವೆಲ್ಸ್ ವ್ಯವಸ್ಥಾಪಕ ಚೇತನ್ ಪೂಜಾರಿ ಹಾಗೂ ಶ್ರೀ ಕ್ರಿಕೆಟರ್‍ಸ್ ತಂಡದ ಸರ್ವ ಸದಸ್ಯರು ಹಾಜರಿದ್ದರು.