ಬೈಂದೂರು: ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಜೋಗೂರು ಶಿರೂರು ಇದರ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜೂನ್ 20 ಹಾಗೂ 21 ರಂದು ನಡೆಯಲಿದೆ. .ಜೂನ್ 20 ರಂದು ಸಂಜೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು ಜೂ.21 ರಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಪ್ರಾರ್ಥನೆ,ಕಲಶ ಸ್ಥಾಪನೆ,ಅವಾಸ ಹೋಮ,ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವರಿಗೆ ಕಲಾಭಿವೃದ್ದಿ ಹೋಮ,ಪ್ರಸಾದ ವಿತರಣೆ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

four × four =