ಬೈಂದೂರು: ಎಮ್ ಫೌಂಡೆಶನ್ ಶಿರೂರು ಇದರ ವತಿಯಿಂದ ಹದಿನಾರು ಫಲಾನುಭವಿಗಳಿಗೆ ಉಚಿತ ಮನೆ ಹಸ್ತಾಂತರಿಸಲಾಯಿತು. ಎಮ್ ಎಮ್ ಫೌಂಡೆಶನ್ ಕಳೆದ ಆರು ವರ್ಷಗಳಲ್ಲಿ ನೂರಇಪ್ಪತ್ತಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಿದೆ.ಎಮ್ ಎಮ್ ಫೌಂಡೇಶನ್ ಟ್ರಸ್ಟಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮಣಿಗಾರ್ ಮೀರಾನ್ ಸಾಹೇಬ್ ಈ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ

ಮನೆಗಳನ್ನು ಹಸ್ತಾಂತರಿಸಿ ಮಾತನಾಡಿದ. ಮಣಿಗಾರ ಜಿಫ್ರಿ ಎಮ್ ಎಮ್ ಫೌಂಡೇಶನ್ ಶಿರೂರು ಹಾಗೂ ಇತರ ಪರಿಸರದಲ್ಲಿ ಕಳೆದ ಶಿಕ್ಷಣ ಆರೋಗ್ಯ ಮತ್ತು ಸಾಮಾಜಿಕ ಕಾರ್ಯದಲ್ಲಿ ತನ್ನದೆ ಆದ ಸೇವೆ ನೀಡುತ್ತಿದ್ದು ಈ ವರ್ಷ ಹದಿನಾರು ಕುಟುಂಬಗಳಿಗೆ ಉಚಿತ ಮನೆಗಳನ್ನು ನೀಡಿದೆ ಎಂದರು.

ಈ ಸಂಧರ್ಭದಲ್ಲಿ ಮಣಿಗಾರ ಜಾಫರ್ ,ಹ್ಯಾರಿಸ್, ಮಾಜಿ ಗ್ರಾ ಪಂ ಮಾಜಿ ಉಪಾದ್ಯಕ್ಷ  ಕಾಪ್ಸಿ ನೂರ್ ಮಹ್ಮದ್, ಅರುಣ್ ಕುಮಾರ್ ಶಿರೂರು,ರವೀಂದ್ರ ಶೆಟ್ಟಿ, ಸಾಧಿಕ್, ಫಯಾಸ್,ಸದಸ್ಯರಾದ ಅಲ್ತಾಫ್, ಶಖೀಲ್  ಅಹ್ಮ್ ದ್ ಮುಂತಾದವರು ಹಾಜರಿದ್ದರು.

 

Leave a Reply

Your email address will not be published. Required fields are marked *

5 + eighteen =