ಶಿರೂರು: ಶಿರೂರಿನ ಐತಿಹಾಸಿಕ ಪ್ರಸಿದ್ದ ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.ನಾಲ್ಕು ದಿನಗಳ ಕಾಲ ಅತ್ಯಂತ ಅಚ್ಚುಕಟ್ಟು ಹಾಗೂ ಧಾರ್ಮಿಕ ಶಿಸ್ತು ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತ್ತು.ಮಂಗಳವಾರ ಸಂಜೆ ಸಮಾರೋಪ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಸಹಕರಿಸಿದ ಸರ್ವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಹಟ್ಟಿಯಂಗಡಿ ಅನುವಂಶಿಕ ಆಡಳಿತ ಧರ್ಮದರ್ಶಿ ಬಾಲಚಂದ್ರ ಭಟ್ ಮಾತನಾಡಿ ಗ್ರಾಮೀಣ ಭಾಗವಾದ ಶಿರೂರಿನಲ್ಲಿ ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ ಇತರ ಊರುಗಳಿಗೆ ಮಾದರಿಯಾಗಿದೆ.ಪ್ರತಿಷ್ಠಾಪನೆ ಬಳಿಕ ನಿರಂತರ ಧಾರ್ಮಿಕ ಕಾರ್ಯಕ್ರಮ ಮತ್ತು ಭಜನೆ ಸಂಕೀರ್ತನೆಗಳ ಮೂಲಕ ನಿರಂತರ ಭಕ್ತರು ಬರುವ ಧಾರ್ಮಿಕ ಕ್ಷೇತ್ರವಾಗಿ ಮೂಡಿಬರಬೇಕಿದೆ.ದೇವಸ್ಥಾನದ ಅಭಿವೃದ್ದಿ ಊರಿನ ಶ್ರೇಯೋಭಿವೃದ್ದಿಯ ಪ್ರತೀಕವಾಗಿದೆ.ಆದ್ಯಾತ್ಮಿಕ ಒಲವು ಮನುಷ್ಯರಿಗೆ ಶಾಂತಿ, ನೆಮ್ಮದಿಯನ್ನು ನೀಡುತ್ತದೆ ಎಂದರು.
ಬೊಬ್ಬರ್ಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಪಾದ ಕುಮಾರ್ ಮೊಗೇರ್ ಅಧ್ಯಕ್ಷತೆ ವಹಿಸಿದ್ದರು.

ಸಿದ್ದಿ ಸಮಾಧಿ ಯೋಗ ಗುರುಗಳಾದ ಕೇಶವ ಬೆಳ್ನಿ,ಸೋಡಿಗದ್ದೆ ಮಹಾಸತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿದಾಸ್ ಮೊಗೇರ್,ಅಳ್ವೆಗದ್ದೆ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಶ್ರೀಧರ ಅಣ್ಣಪ್ಪ,ಉದ್ಯಮಿ ಮೋಹನ ಕುಷ್ಟು ಪೂಜಾರಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಪತ್ರಕರ್ತ ಅರುಣ್ ಕುಮಾರ್ ಶಿರೂರು,ಅಳ್ವೆಗದ್ದೆ ಮಹಾಗಣಪತಿ ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ರಾಮ ಎನ್.ಅಳ್ವೆಗದ್ದೆ, ಅಳ್ವೆಗದ್ದೆ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣಪತಿ ಎಸ್.ಮೊಗವೀರ, ಅಳ್ವೆಗದ್ದೆ ಮಹಾಗಣಪತಿ ದೇವಸ್ಥಾನದ ಗೌರವಾಧ್ಯಕ್ಷ ನಾರಾಯಣ ಟಿ.ಅಳ್ವೆಗದ್ದೆ,ಕರ್ನಾಟಕ ಬ್ಯಾಂಕ್ ನಿವೃತ್ತ ಮೆನೇಜರ್ ಕೃಷ್ಣ ಮೊಗೇರ್,ಖ.ರೈ.ಸೇ.ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ,ಬೆಣ್ಣೆಕುದ್ರು ಮೊಗವೀರ ಮಹಾಸಭಾ ಬಾರ್ಕೂರು ಸಂಸ್ಥಾನದ ಅಧ್ಯಕ್ಷ ಸತೀಶ ಅಮೀನ್,ಅಕ್ಷಯ ನಾರಾಯಣ ಮಾಸ್ತಿ,ಬೊಬ್ಬರ್ಯ ದೈವಸ್ಥಾನದ ಮಾಜಿ ಅಧ್ಯಕ್ಷ ರಾದ ನಾರಾಯಣ ಎಸ್,ಮೊಗವೀರ,ಗಣಪತಿ ಬಡಿಯಪ್ಪ ಮೊಗವೀರ,ಪದ್ಮಯ್ಯ ಎಸ್.ಮೊಗೇರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.ದೇವಸ್ಥಾನದ ಅರ್ಚಕರಾದ ರಾಮಚಂದ್ರ ಭಟ್ ಹಾಗೂ ದೇವಸ್ಥಾನದ ಕರ ಸೇವೆ ಮಾಡಿದ ಭಕ್ತಾಧಿಗಳನ್ನು ಗೌರವಿಸಲಾಯಿತು.

ಮಹಾಗಣಪತಿ ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಗೌರವಾಧ್ಯಕ್ಷ ರಾಮ ಕೆ.ದೊಡ್ಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪಾಂಡುರಂಗ ಮೊಗೇರ್ ಸ್ವಾಗತಿಸಿದರು.ಲೋಕೇಶ್ ಮೊಗೇರ್ ಕಾರ್ಯಕ್ರಮ ನಿರೂಪಿಸಿದರು.ಅಜೇಯ್ ಶಂಕರ್ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಕೃಷ್ಣ ಸ್ಮಾರ್ಟ್ ಸ್ಟುಡಿಯೋ ಶಿರೂರು