ಬೈಂದೂರು:  ಬೈಂದೂರು ಕ್ಷೇತ್ರದಲ್ಲಿ ಹಿಂದೆಂದೂ ರೀತಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.ಗ್ರಾಮ ಗ್ರಾಮಗಳಲ್ಲಿ ಹನಿ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಇದೆ.ಜನಸಾಮಾನ್ಯರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಈ ಮಟ್ಟದ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ ಕಾರಣ ಇದಕ್ಕೆ ಜಿಲ್ಲಾಡಳಿತ ನೇರ ಹೊಣೆ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತಿದೆ:  ಜಿಲ್ಲೆಯಾಧ್ಯಂತ ಆಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.ಮರಳುಗಾರಿಕೆ ಅನುಕೂಲಕ್ಕೆ ತರಾತುರಿಯಲ್ಲಿ ಸಭೆ ನಡೆಸಿ ನಿರ್ಣಯವನ್ನೆ ಬದಲಿಸುತ್ತಾರೆ.ಆದರೆ ಜನಸಾಮಾನ್ಯರು ಕುಡಿಯಲು ನೀರಿಲ್ಲದೆ ಸಾಯುವಂತ ಪರಿಸ್ಥಿತಿ ಇದ್ದರೆ ಅಧಿಕಾರಿಗಳು ಮಾತ್ರ ಹವಾನಿಯತ್ರಿತ ಕೊಠಡಿಯಿಂದ ಹೊರ ಬರುತ್ತಿಲ್ಲ.ಡಿ.ಸಿ, ಎ.ಸಿ , ತಹಶೀಲ್ದಾರರು,ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನಿರ್ಲಕ್ಷವೇ ಇದಕ್ಕೆ ನೇರ ಹೊಣೆ.ಇಷ್ಟೊಂದು ದೊಡ್ಡ ಮಟ್ಟದ ಜಲಕ್ಷಾಮದ ಬರಗಾಲ ರೀತಿಯಿದ್ದರು ಸಹ ಜಿಲ್ಲಾಡಳಿತ ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತಿದೆ.ಸರಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳಲಾಗದೆ ಬೈಂದೂರು ಕ್ಷೇತ್ರವನ್ನು ನಿರ್ಲಕ್ಷಿಸಿ ಬಿಟ್ಟಿದೆ.ನೂರಾರು ಕೋಟಿ ಜಲಜೀವನ್ ಮಿಷನ್ ಅವ್ಯವಸ್ಥೆ, ಮೇವು ಹಗರಣಗಳು,ದೊಡ್ಡ ಹಗರಣವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಗುತ್ತಿಗೆದಾರರು ಕೋಟಿ ಕೋಟಿ ಹಣ ಗುಳುಂ ಮಾಡಿದ್ದಾರೆ.ಅಧಿಕಾರಿಗಳು ಗುತ್ತಿಗೆದಾರರಿಗೆ ಅನುಕೂಲ ಮಾಡಿ ಹಣ ಬಿಡುಗಡೆ ಮಾಡಿದ್ದು ಇಡೀ ಕ್ಷೇತ್ರದಲ್ಲಿ ಯಾವ ಊರಿನಲ್ಲೂ ಕೂಡ ಮನೆಗಳಿಗೆ ಜಲಜೀವನ್ ಮಿಷನ್ ನೀರು ದೊರೆತಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೇಳತೀರದಾಗಿದೆ.ಜನರ ನೋವಿಗೆ ಸ್ಪಂಧಿಸಬೇಕಾದ ಜಿಲ್ಲಾಡಳಿತ ನಿದ್ರೆ ಮಾಡುತ್ತಿದೆ ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಬುಧವಾರ ಬೈಂದೂರು ರೈತ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.

ಬ್ರಹತ್ ಪ್ರತಿಭಟನೆ ಎಚ್ಚರಿಕೆ:  ಬೇಸಿಗೆ ಆರಂಭದಿಂದ ಇಲ್ಲಿಯವರೆಗೆ ಮುಂದಿನ ಮಸ್ಯೆಗಳ ಕುರಿತು ಒಂದೆ ಒಂದು ಸಭೆ ನಡೆದಿಲ್ಲ.ಟಾಸ್ಕ್‌ಪೋರ್ಸ್ ಸಭೆ ಕೂಡ ಆಗಿಲ್ಲ.ಶೀಘ್ರ ಬೈಂದೂರು ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ವಿಶೇಷ ಸಭೆ ಕರೆದು ನಿರ್ಣಯ ಕೈಗೊಳ್ಳದಿದ್ದರೆ ಸಾವಿರಾರು ಜನರು ಖಾಲಿ ಕೊಡ ಹಿಡಿದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ.ಜನರ ನೋವಿನ ಜೊತೆ ಚೆಲ್ಲಾಟ ಸಮಂಜಸವಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ವೀರಭದ್ರ ಗಾಣಿಗ,ಹೆರಿಯ ಪೂಜಾರಿ,ಪದ್ಮಾಕ್ಷ ಗೋಳಿಬೇರು,ನಿತಿನ್ ಗಂಗೊಳ್ಳಿ,ಸಂದೀಪ್ ಗಂಗೊಳ್ಳಿ ಹಾಜರಿದ್ದರು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

9 − seven =