ಬೈಂದೂರು: ಬೈಂದೂರಿನ ಐತಿಹಾಸಿಕ ಪ್ರಸಿದ್ದ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವದ ಪ್ರಯುಕ್ತ ಎ..16ರಿಂದ ಮೊದಲ್ಗೊಂಡು ಎ.24ರ ತನಕ ಜರುಗಲಿದ್ದು.ಮನ್ಮಹಾರಥೋತ್ಸವದ ಪೂರ್ವಭಾವಿಯಾಗಿ ಧ್ವಜಾರೋಹಣದ ಧಾರ್ಮಿಕ  ಕಾರ್ಯಕ್ರಮ ಗುರುವಾರ  ನಡೆಯಿತು.ಅರ್ಚಕ ಕೂಟಾಡಿ ರಾಮಕೃಷ್ಣ ಭಟ್ ಕಿರಿಮಂಜೇಶ್ವರ ಇವರ ಆಚಾರ್ಯತ್ವದಲ್ಲಿ ಧ್ವಜಾರೋಹಣ ನೆರವೇರಿತು. ಬೆಳಿಗ್ಗೆ ದೇವಳದಲ್ಲಿ ಕಲಶಪ್ರತಿಷ್ಠೆ, ಕಂಕಣ ಧಾರಣೆಯ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆಯಿತು.

ದೇವಳದ ಅರ್ಚಕರಾದ ಮಂಜುನಾಥ ಮಯ್ಯ, ನಾಗರಾಜ ಭಟ್, ರಾಜೇಶ ಐತಾಳ್, ಶಿವಾನಂದ ಅಡಿಗ ಸಹಕರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ ಬೈಂದೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ದೇವಳದ ಸಿಬ್ಬಂದಿ ವರ್ಗ ಹಾಗೂ ಊರಿನ ಹತ್ತು ಸಮಸ್ತರು ಭಾಗವಹಿಸಿದ್ದರು.

ಪ್ರತಿದಿನ ಅಪ್ಪಿಕಟ್ಟೆ, ಬಿಯಾರಕಟ್ಟೆ, ಜಟ್ಕನಕಟ್ಟೆ, ನಾಕಟ್ಟೆ, ಪಡುವರಿಕಟ್ಟೆ, ಬಂಕೇಶ್ವರಕಟ್ಟೆ ಉತ್ಸವಗಳು ಜರುಗಲಿದ್ದು, ಎ.22ರಂದು ಬುಧವಾರ ಶ್ರೀ ಸೇನೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಹಾಗೂ ಮೇ.23ರಂದು ಅವಭೃಥೋತ್ಸವ, ಎ.24ರಂದು ಧ್ವಜಾವರೋಹಣ, ಸಂಜೆ ನಗರೋತ್ಸವ ನಡೆಯಲಿದೆ.

Leave a Reply

Your email address will not be published. Required fields are marked *

eleven + nineteen =