ಬೈಂದೂರು,ಮಾ.30: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್‌ನ ಬ್ಯಾನರ್ ಅಡಿಯಲ್ಲಿ ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರದ ಶಿಖಾ ಬಿಜೂರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.ಮಾ.28 ರಂದು ಬೆಂಗಳೂರಿನಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್ ಶಿಫ್ ನಲ್ಲಿ ಶಿಖಾ ಬಿಜೂರ್ ಅವರು ಮಹಿಳಾ ಸಬ್-ಜೂನಿಯರ್ 58–61 ಕೆಜಿ ವಿಭಾಗದಲ್ಲಿ ವಿಜೇತರಾದರು. ಶಿಖಾ ಕುಂದಾಪುರದ ಎವಲ್ಯೂಷನ್ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ & ಫಿಟ್‌ನೆಸ್‌ನಲ್ಲಿ ಕೋಚ್ ಘ್ರಶ್ಮೇಶ್ ಕುಂದರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರು ಶಿಖಾ ಇವರು ಶ್ರೀಧರ ಬಿಜೂರು ಮತ್ತು ದೀಪಿಕಾ ದಂಪತಿಯ ಪುತ್ರಿಯಾಗಿದ್ದಾರೆ.
