ಬೈಂದೂರು: ಸುರಭಿ (ರಿ.) ಬೈಂದೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾಟಕ ವಾಚನ ಕಾರ್ಯಕ್ರಮ ರೋಟರಿ ಭವನ ಬೈಂದೂರಿನಲ್ಲಿ ನಡೆಯಿತು.

ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲೂಕು ಘಟದ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿ ಮಾತನಾಡಿ ರಂಗಭೂಮಿ ಕಥಾನಕಗಳ ಮೂಲಕ ವಾಸ್ತವತೆಯ ನೈಜತೆಯನ್ನು ಜಗತ್ತಿಗೆ ನೀಡುತ್ತದೆ.ರಂಗಾನುಭವ ವ್ಯಕ್ತಿಯ ಬದುಕಿಗೆ ಚೈತನ್ಯ ನೀಡುತ್ತದೆ.ಓದಿನ ಮೂಲಕ ನಾಟಕದ ಪರಿಚಯ ವಿಭಿನ್ನ ಪ್ರಯೋಗವಾಗಿದೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ,ಹೆಸ್ಕತ್ತೂರು ಸರಕಾರಿ ಫ್ರೌಢಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್,ಸ.ಹಿ.ಪ್ರಾ.ಶಾಲೆ ಕಡಿಕೆ ನಾಡದ ಶಿಕ್ಷಕ ಸಂದೀಪ್,ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ಉಪಸ್ಥಿತರಿದ್ದರು.

ರಾಘವೇಂದ್ರ ಕೆ.ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ಲಕ್ಷ್ಮಣ ಕೊರಗ ವಂದಿಸಿದರು.

Leave a Reply

Your email address will not be published. Required fields are marked *

10 − three =