ಉಪ್ಪುಂದ; ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿದಾಗ ಅವರ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಈ ನಿಟ್ಟಿನಲ್ಲಿ ಮಣಿಪಾಲ್ ಪೌಂಡೇಶನ್ ಸಂಸ್ಥೆ ಕಾರ್ಯಪ್ರವರ್ತವಾಗಿದೆ. ಮಣಿಪಾಲ್ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಮಾಜಮುಖಿ ಚಿಂತನೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಬೆಂಗಳೂರು ಮಣಿಪಾಲ್ ಪೌಂಡೇಶನ್ ಸಿ.ಎಸ್.ಆರ್. ಕೋ- ಆರ್ಡೀನೇಟರ್ ಲಿನ್ಸಿ ಮ್ಯಾಥ್ಯೂ ಹೇಳಿದರು ಅವರು ಮಾ.28ರಂದು ಡಾ. ಗೋವಿಂದಬಾಬು ಪೂಜಾರಿ ದತ್ತು ಸ್ವೀಕಾರ ಪಡೆದ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೆಂಗಳೂರು ಮಣಿಪಾಲ್ ಪೌಂಡೇಶನ್ ಹಾಗೂ ಉಪ್ಪುಂದ ಶ್ರೀ ವರಲಕ್ಷ್ಮೇ ಟ್ರಸ್ಟ್ ವತಿಯಿಂದ ಸುಮಾರು ರೂ.7ಲಕ್ಷ ಮೌಲ್ಯದ ಶಾಲಾ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ. ಗೋವಿಂದಬಾಬು ಪೂಜಾರಿ ಪ್ರಸ್ತಾವಿಸಿ, ಶಾಲೆಯು ಊರಿನ ದೇವಸ್ಥಾನ ಇದ್ದಂತೆ ಶಾಲೆಯು ಅಭಿವೃದ್ಧಿಯಾದಂತೆ ಆ ಗ್ರಾಮದ ಮೌಲ್ಯವು ಹೆಚ್ಚುತ್ತದೆ.. ಶಾಲೆಗೆ ನೀಡುವ ಕೊಡುಗೆ ದೇವರಿಗೆ ಸೇವೆ ಸಲ್ಲಿಸಿದಂತೆ ಶಾಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ವಿನಂತಿಸಿ, ಮಕ್ಕಳಲ್ಲಿ ಕೌಶಲ ಶಿಕ್ಷಣ ಹೆಚ್ಚಿಸಲು ಪೋಷಕರ ಕಾಳಜಿ ವಹಿಸುವ ಅಗತ್ಯವಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಮಾತನಾಡಿ, ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರಕುವಂತೆ ಮಾಡಲು ಶ್ರಮಿಸುತ್ತಿರುವುದು ಡಾ. ಗೋವಿಂದ ಬಾಬು ಪೂಜಾರಿಯವರ ಸೇವಾ ಶ್ಲಾಘನೀಯ ಎಂದರು.
ಹಿರಿಯ ನಾಗರಿಕ ವಿಶ್ವೇಶ್ವರ ಅಡಿಗ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಡಾ. ಗೋವಿಂದ ಬಾಬು ಪೂಜಾರಿಯವರು ನೀಡುತ್ತಿರುವ ಸೇವೆಯನ್ನು ಅಭಿನಂದಿಸಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ ವಿ.ದೇವಾಡಿಗ ಅಧ್ಯಕ್ಷತೆ ವಹಿಸಿ ದಾನಿಗಳು ಶಾಲೆಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಮಣಿಪಾಲ್ ಪೌಂಡೇಶನ್ ಸುಭಾಷ್, ಮಕ್ಕಳ ಮಿತ್ರ ರಾಜೇಂದ್ರ ಬಿಜೂರು, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದೀಶ್ ದೇವಾಡಿಗ, ಜಯರಾಮ ಶೆಟ್ಟಿ ಬಿಜೂರು, ಸಮಾಜ ಸೇವಕ ಸುಬ್ರಹ್ಮಣ್ಯ ಬಿಜೂರು, ಅಲಕ ಸುರೇಶ್ ಬಿಜೂರು, ನಿವೃತ್ತ ಮುಖ್ಯ ಶಿಕ್ಷಕ ಗಿರೀಶ್ ಶ್ಯಾನುಭಾಗ್, ಉಪ್ಪುಂದ ಶ್ರೀ ವರಲಕ್ಷ್ಮೇ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥಾಪಕ ನಾಗರಾಜ ಪಿ. ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಎಸ್. ಸ್ವಾಗತಿಸಿದರು. ಶಿಕ್ಷಕಿ ಸುಮತಿ ನಿರೂಪಿಸಿದರು. ದೈ.ಹಿ.ಶಿಕ್ಷಕ ರವಿ ವಂದಿಸಿದರು.

Leave a Reply

Your email address will not be published. Required fields are marked *

two − one =