ಬೈಂದೂರು: ಎಂ. ಎಂ.ಫೌಂಡೇಶನ್ ಶಿರೂರು ಇದರ ವತಿಯಿಂದ ಉದ್ಯಮಿ ಹಾಗೂ ಸಮಾಜ ಸೇವಕರಾದ ಮಣೆಗಾರ್ ಮೀರಾನ್ ಸಾಹೇಬ್ ರವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗನಾಡು ಶಾಲೆಗೆ ಕೊಡಮಾಡಿದ  ಟ್ರ್ಯಾಕ್ ಸೂಟನ್ನು ಅವರ ಸಹೋದರ ಉದ್ಯಮಿ ಮಣೆಗಾರ್ ಜಿಪ್ರಿ ಸಾಹೇಬ್ ಶಾಲಾ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅಂತಹ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ದೊರೆತಾಗ ಶೈಕ್ಷಣಿಕ ಸಾಧನೆ ಹೆಚ್ಚುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ ಬಿಲ್ಲವ, ಪತ್ರಕರ್ತ ಅರುಣ್ ಕುಮಾರ್ ಶಿರೂರು,ಶಿಕ್ಷಕಿ ಶಾರದಾ,ಶಿಕ್ಷಕ ರಾಘವೇಂದ್ರ  ಉಪಸ್ಥಿತರಿದ್ದರು.

ದೈ ಹಿಕ ಶಿಕ್ಷಣ ಶಿಕ್ಷಕಿ ಗೌರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ಹೇಮಲತ ವಂದಿಸಿದರು.

News/GIRI SHIRURU

Leave a Reply

Your email address will not be published. Required fields are marked *

one + 11 =