ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಇದರ ಶೈಕ್ಷಣಿಕ,ಸಾಮಾಜಿಕ ಸೇವಾ ಸಂಸ್ಥೆ ಇದರ ವತಿಯಿಂದ ನೂತನವಾಗಿ ನಿಮಾ೯ಣಗೊಂವಿರುವ 19ನೇ ಮನೆ ಹಸ್ತಾಂತರ ಕಾರ್ಯಕ್ರಮ ಎ.4 ರಂದು ಏಳಜಿತ ಗ್ರಾಮದ ಗಣವಡಿಯಲ್ಲಿ ನಡೆಯಲಿದೆ.
ಧರ್ಮಪ್ರಚಾರಕ ಸಂತರು ಸನಾತನ ಸಂಸ್ಥೆ ಇದರ ರಮಾನಂದ ಗೌಡ ನೂತನ ಮನೆಯನ್ನು ಉದ್ಘಾಟಿಸಲಿದ್ದಾರೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಜೋಗಿಜಡ್ಡು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.