ಬೈಂದೂರು: ಲಾವಣ್ಯ ಬೈಂದೂರು ಇದರ 49ನೇ ವಾರ್ಷಿಕೋತ್ಸವ ಹಾಗೂ ಲಾವಣ್ಯದ ಸ್ಥಾಪಕ ದಿ. ಉಪ್ಪುಂದ ಶ್ರೀನಿವಾಸ ಪ್ರಭು ಇವರ ಸ್ಮರಣಾರ್ಥ ಮಾ.04ರಿಂದ 08ರ ತನಕ ಇಲ್ಲಿನ ಶ್ರೀಶಾರದಾ ವೆದಿಕೆಯಲ್ಲಿ ಪ್ರತಿದಿನ 7 ಕ್ಕೆ “ರಂಗಶ್ರೀ-ರಂಗಹಬ್ಬ’ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನರಸಿಂಹ ನಾಯಕ್ ಲಾವಣ್ಯ ರಂಗಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.04ರಂದು ರಾಯಚೂರು ಉದ್ಯಮಿ ಯು. ಸದಾನಂದ ಪ್ರಭು ಸಮಾರಂಭ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ನರಸಿಂಹ ನಾಯಕ್ ಅಧ್ಯಕ್ಷತೆವಹಿಸಲಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ ಶುಭಾಶಂಸನೆ ಮಾಡಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ. ರಿಥಂ ನೃತ್ಯ ಹಾಗೂ ಕಲಾ ಶಾಲೆ ಸ್ಥಾಪಕ ಹಾಗೂ ಶಿಕ್ಷಕ ನಾಗೇಂದ್ರ ಕುಮಾರ್ ಬಂಕೇಶ್ವರ ಇವರನ್ನು ಸನ್ಮಾನಿಸಲಾಗುತ್ತದೆ. ನಂತರ ಲಾವಣ್ಯ ಬೈಂದೂರು ಇವರಿಂದ ನಾಟಕ ಸಂಜೆ ಹಾಡು ನಾಟಕ ಪ್ರದರ್ಶನವಿದೆ.
ಮಾ.05ರಂದು ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಅಧ್ಯಕ್ಷತೆಯಲ್ಲಿ ಹೈದರಾಬಾದ್ ಉದ್ಯಮಿ ಹಾಗೂ ಧಾರ್ಮಿಕ ಮುಖಂಡ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಶುಭಹಾರೈಸಲಿದ್ದಾರೆ. ತಹಶೀಲ್ದಾರ್ ರಾಮಚಂದ್ರಪ್ಪ ಸೇರಿದಂತೆ ವಿವಿದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹವ್ಯಾಸಿ ರಂಗಭೂಮಿ ನಿರ್ದೇಶಕ, ಕಲಾವಿದ ಶ್ರೀಶ ಭಟ್ ನಾಯ್ಕನಕಟ್ಟೆ ಇವರಿಗೆ ಸನ್ಮಾನ ನಡೆಯಲಿದೆ. ನಂತರ ನೆನಪು ಕಲ್ಬರಲ್ ಮತ್ತು ಎಜ್ಯುಕೇಷನಲ್ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಇವರಿಂದ ಮಾಯಾದ್ವೀಪ ನಾಟಕ ಪ್ರದರ್ಶನಗೊಳ್ಳಿದೆ.
ಮಾ06 ರಂದು ಉದ್ಯಮಿ ಬಿಜೂರು ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಶೂಭಾಶಂಸನೆಗೈಯಲಿದ್ದಾರೆ. ರಾಜ್ಯಪ್ರಸಸ್ತಿ ಪುರಸ್ಕೃತ ಶಿಕ್ಷಕ ಸಿ. ಎನ್. ಬಿಲ್ಲವ ಇವರನ್ನು ಸನ್ಮಾನಿಸಲಿದ್ದೇವೆ. ನಂತರ ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಇವರಿಂದ ಭಂಡ ನನ್ನ ಗಂಡ ನಾಟಕ ಪ್ರದರ್ಶನವಿದೆ.
ಮಾ 07 ರಂದು ಬೆಂಗಳೂರು ಉದ್ಯಮಿ ರಾಜೇಂದ್ರ ಹೆಜ್ಜಾಲು ಇವರ ಅಧ್ಯಕ್ಷತೆವಹಿಸಲಿದ್ದು, ಮೋಹನ ಬೈಂದೂರು ಶುಭಹಾರೈಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಇತರ ಅತಿಥಿಗಳು ಭಾಗವಹಿಸಲಿದ್ದಾರೆ. ಯಕ್ಷಗಾನ ಭಾಗವತ ವಸ್ರೆ ಸುಧಾಕರ ಕೊಠಾರಿ ಇವರಿಗೆ ಸನ್ಮಾನ ನಡೆಯಲಿದೆ. ನಂತರ ಲಾವಣ್ಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡದವರಿAದ ಜ್ವಾಲಾಪ್ರತಾಪ ಯಕ್ಷಗಾನ ಪ್ರದರ್ಶನವಿದೆ.
ಮಾ.08ರಂದು ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಲಿದ್ದಾರೆ. ನಿವೃತ್ತ ಶಿಕ್ಷಕ ಸದಾಶಿವ ಶ್ಯಾನುಭೋಗ್ ಶುಭಾಶಂಸನೆಗೈಯಲಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಪಾಕತಜ್ಞ ಬಿಜೂರು ಉಮೇಶ ಶ್ಯಾನುಭಾಗ್ ಇವರನ್ನು ಸನ್ಮಾನಿಸಲಾಗುವುದು. ನಂತರ ನಟಮಿತ್ರರು ಹವ್ಯಾಸಿ ಕಲಾಸಂಘ ತೀರ್ಥಹಳ್ಳಿ ಇವರಿಂದ ಆ ಊರು ಈ ಊರು ನಾಟಕ ಪ್ರದರ್ಶನಗೊಳ್ಳಿದೆ ಎಂದು ಮಾಹಿತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ, ವ್ಯವಸ್ಥಾಪಕ ಮೂರ್ತಿ ಬೈಂದೂರು, ಕಾರ್ಯಕಾರಿ ಸಮಿತಿ ಸದಸ್ಯ ಬಿ. ಕೃಷ್ಣಮೂರ್ತಿ ಕಾರಂತ್ ಇದ್ದರು.