ಬೈಂದೂರು: ಶ್ರೀ ವಿ.ವಿ.ವಿ ಮಂಡಳಿ (ರಿ.) ಹೆಮ್ಮಾಡಿ,ರತ್ತುಬಾಯಿ ಜನತಾ ಫ್ರೌಢಶಾಲೆ ಬೈಂದೂರು,ವಿವಿಧ ಸಂಘ ಸಂಸ್ಥೆಗಳು ಹಾಗೂ ಅನೇಕ ಸ್ನೇಹಿತ ವರ್ಗದವರ ವತಿಯಿಂದ ಕಳೆದ 26 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಆನಂದ ಮದ್ದೋಡಿ ಯವರ ಆನಂದಾಭಿನಂದನಾ ಬೀಳ್ಕೋಡುಗೆ ಸಮಾರಂಭ ರತ್ತುಬಾಯಿ ಜನತಾ ಫ್ರೌಢಶಾಲೆ ಬೈಂದೂರಿನಲ್ಲಿ ನಡೆಯಿತು.

ಮಾಜಿ ಶಾಸಕರು ಹಾಗೂ ಶ್ರೀ ವಿ.ವಿ.ವಿ ಮಂಡಳಿ (ರಿ.) ಹೆಮ್ಮಾಡಿ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿ ನಿವ್ರತ್ತಿ ಹೊಂದಿದ ಆನಂದ ಮದ್ದೋಡಿ ದಂಪತಿ ಯವರನ್ನು ಶಾಲೆಯ ವತಿಯಿಂದ ಸಮ್ಮಾನ ನೆರವೇರಿಸಿ ಮಾತನಾಡಿ  ಪ್ರತಿ ಕೆಲಸವೂ ಕೂಡ ನಿಷ್ಠೆಯಿಂದ ಮಾಡಿದಾಗ ಫಲ ದೊರೆಯುತ್ತದೆ.ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ.ಸೇವೆಯಲ್ಲಿರುವಾಗ ನಮ್ಮ ಉತ್ತಮ ನಡವಳಿಕೆ ಜನರ ಮನಸ್ಸಿನಲ್ಲಿ ಸದಾ ಉಳಿಯುತ್ತದೆ.ಸಾರ್ಥಕ ಸೇವೆ ನಿವೃತ್ತಿ ಬಳಿಕವೂ ಸಂತೃಪ್ತಿ ನೀಡುತ್ತದೆ.ಅಂತಹ ಸಾಧನೆಯಲ್ಲಿ ಆನಂದ ಮದ್ದೋಡಿ ಅತ್ಯುತ್ತಮ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಆನಂದ ಮದ್ದೋಡಿ ಮಾತನಾಡಿ ಬದುಕಿಗಾಗಿ ಆರಿಸಿಕೊಂಡ ವೃತ್ತಿ ಸಮಾಜದಲ್ಲಿ ಗುರುತಿಸಿಕೊಂಡಾಗ ಸಾರ್ಥಕತೆಯ ಭಾವ ಮೂಡುತ್ತದೆ.ಸಹಕರಿಸಿ ನನ್ನನ್ನು ಬೆಳೆಸಿದ ಸರ್ವರು ಯಶಸ್ಸಿನ ಪಾಲುದಾರರು ಎಂದರು.

ಮುಖ್ಯ ಅತಿಥಿಗಳಾಗಿ ವಿ.ವಿ.ವಿ ಮಂಡಳಿ ಉಪಾಧ್ಯಕ್ಷ ಎಸ್.ರಾಜು ಪೂಜಾರಿ,ಮಿಥುನ್ ಶೆಟ್ಟಿ ಯಡ್ತರೆ,ನಿವೃತ್ತ ಮುಖ್ಯ ಶಿಕ್ಷಕ  ವಿಶ್ವೇಶ್ವರ ಅಡಿಗ,ನಿವೃತ್ತ ಬ್ಯಾಂಕ್ ಅಧಿಕಾರಿ ಗೋವಿಂದ ಸುಬ್ರಾಯ ಮದ್ದೋಡಿ,ಡಾ.ಪ್ರಭಾಕರ ಎಚ್ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು,ಶ್ರೀರಾಮ ವಿವಿದೋದ್ದೇಶ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶೇರುಗಾರ್ ಬಿಜೂರು,ಉದ್ಯಮಿ ವೆಂಕಟರಮಣ ಬಿಜೂರು,ಗ್ಯಾರೇಜ್ ಮಾಲಕರ ಸಂಘ ಬೈಂದೂರು ಅಧ್ಯಕ್ಷ ಕೃಷ್ಣಯ್ಯ ಮದ್ದೋಡಿ ,ಡಾ.ಸುಬ್ರಹ್ಮಣ್ಯ ಭಟ್,ಗೋಪಾಲ ಶೆಟ್ಟಿ ಮೂರೂರು,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ,ಫ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕಿರಣ ಹೆಗ್ಡೆ,ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಪಿ.ಯಡ್ತರೆ,ಅನುದಾನಿತ ಫ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ,ಸುರಭಿ ಸಂಸ್ಥೆಯ ನಿರ್ದೇಶಕ ಸುಧಾಕರ ಪಿ.ಬೈಂದೂರು,ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ,ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಚೈತ್ರ ಸತೀಶ್,ದಯಾನಂದ ಶೆಟ್ಟಿ,ಅಂಬೇಡ್ಕರ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ,ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ನಾರಾಯಣ,ಪೋಷಕರ ಪ್ರತಿನಿಧಿ ವಿನಯಾ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಾಗರತ್ನ ಎಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ ಮಾಕೋಡಿ ಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು ಹಾಗೂ ಆನಂದ ಮದ್ದೋಡಿ ಯವರನ್ನು ಶಾಲೆಯ ವತಿಯಿಂದ,ಅಭಿಮಾನಿಗಳಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಮ್ಮಾನಿಸಲಾಯಿತು.

ರತ್ತುಬಾಯಿ ಜನತಾ ಫ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಕಾಶ ಮಾಕೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶ್ರೀ ವಿ.ವಿ.ವಿ ಮಂಡಳಿ (ರಿ.) ಹೆಮ್ಮಾಡಿ ನಿರ್ದೇಶಕ ರಘುರಾಮ ಕೆ.ಪೂಜಾರಿ ಸ್ವಾಗತಿಸಿದರು.ಶಿಕ್ಷಕ ರಾಮಕೃಷ್ಣ ದೇವಾಡಿಗ ಹಾಗೂ ಗುರುರಾಜ್ ಎಸ್.ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಚೈತ್ರ ಸತೀಶ್ ವಂದಿಸಿದರು.

ವರದಿ/ಗಿರಿ ಶಿರೂರು

ಚಿತ್ರ: ಸುರೇಶ್ ಮಾಕೋಡಿ

 

Leave a Reply

Your email address will not be published. Required fields are marked *

sixteen + nineteen =