ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಭೀಮಘರ್ಜನೆ ಬೈಂದೂರು ತಾಲೂಕು ಸಮಿತಿ ನೂತನ ಸಂಚಾಲಕರಾಗಿ ಮಾದೇವ್ ಬಾಕಡ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನೂತನ ಸಂಚಾಲಕರಾಗಿ ಸಂತೋಷ ಎನ್,ಸಂಘಟನಾ ಸಂಚಾಲಕರಾಗಿ ಸಂದೇಶ್ ನಾಡ,ರಾಘವೇಂದ್ರ ಎನ್. ಜಿ ,ಮಂಜಣ್ಣ ,ನಾರಾಯಣ ಬೈಂದೂರು ,ನಾಗೇಶ್ ನಾಡ ,ಖಚಾಂಚಿಯಾಗಿ ಪ್ರಶಾಂತ್ ಎಂ,ಕಾರ್ಯಕಾರಿಣಿ ಸದಸ್ಯರಾಗಿ ಜಗದೀಶ್ ಕಿರಿಮಂಜೇಶ್ವರ ಆಯ್ಕೆಯಾದರು.

ಜಿಲ್ಲಾ ಸಂಚಾಲಕರಾದ ಚಂದ್ರ ಅಲ್ತಾರ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರು ನೂತನ ಪದಾಧಿಕಾರಿಗಳಿಗೆ ನೀಲಿ ಬಾವುಟ ನೀಡುವುದರೊಂದಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಹಾಲಕ್ಷ್ಮಿ ಬೈಂದೂರು ,ಉಡುಪಿ ತಾಲೂಕು ಸಂಚಾಲಕ ಪ್ರಶಾಂತ್,ಕುಂದಾಪುರ ತಾಲೂಕು ಸಂಚಾಲಕರ ಮಂಜುನಾಥ್ ಗುಡ್ಡೆಯಂಗಡಿ ,ಬೈಂದೂರು ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯಲಕ್ಷ್ಮಿ, ವಿಜಯ್ ಕೆ ಎಸ್ ಮತ್ತು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಸಂಚಾಲಕ ರಾಘು ಶಿರೂರು  ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

 

 

Leave a Reply

Your email address will not be published.

5 × three =