ಬೈಂದೂರು; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯಾಡಿ ಬೈಂದೂರು ವಲಯ ಇದರ ವಾರ್ಷಿಕ ಕ್ರೀಡಾಕೂಟ ಸ.ಹಿ.ಪ್ರಾ.ಶಾಲೆ ಅತ್ಯಾಡಿ ಮೈದಾನದಲ್ಲಿ ನಡೆಯಿತು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನು ಮೂಡಿಸುವಲ್ಲಿ ಸಫಲವಾಗಿದೆ ಹಾಗೂ ಮನಸ್ಸಿಗೆ ಮುದ ನೀಡುತ್ತವೆ.ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ.ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತ ಮಾಡದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡೆ ಅತೀ ಅವಶ್ಯ.ಶಾಲಾ ಹಂತದಲ್ಲೇ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ ಭವಿಷ್ಯ ಸಾಧ್ಯ ಎಂದರು.
ಶಾಲಾ ಎಸ್.ಡಿ.ಸಿ ಅಧ್ಯಕ್ಷ ಮಹಾದೇವ ಪೂಜಾರಿ ಕಿಸ್ಮತ್ತಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ನಾಗರಾಜ್ ಗಾಣಿಗ,ಶಿಕ್ಷಣ ಸಂಯೋಜಕ ಚಂದ್ರ ದೇವಾಡಿಗ,ಸಿಆರ್‌ಪಿ ರಾಮನಾಥ ಮೇಸ್ತ , ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಶೋಕ್ ಸಿ.ಎಂ,ಪಾಲಕ ಪ್ರತಿನಿಧಿ ಹೆರಿಯ ಪೂಜಾರಿ,ಉಪಾಧ್ಯ ಕ್ಷೆ ಕಲ್ಪನಾ ಸುರೇಶ್ ಪೂಜಾರಿ,ಶಾಲಾ ಮುಖ್ಯ ಶಿಕ್ಷಕ ಹಾಲೇಶಪ್ಪ,ಶಾಲಾ ವಿದ್ಯಾರ್ಥಿ ನಾಯಕ ನಿಖಿಲ್,ವಿದ್ಯಾರ್ಥಿ ನಾಯಕಿ ಅಲ್ವಿನ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕ ಸಾಜು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ರಾಜೇಶ್ ವಂದಿಸಿದರು.