ಬೈಂದೂರು: ಐತಿಹಾಸಿಕ ಪ್ರಸಿದ್ದ ಪ್ರವಾಸಿ ಸ್ಥಳಗಳಲ್ಲೊಂದಾದ ಸೋಮೇಶ್ವರ ದೇವಸ್ಥಾನ ಇದರ ವಾರ್ಷಿಕ ಸೋಮೇಶ್ವರ ದೇವರ ನಗರೋತ್ಸವ ಗುರುವಾರ ಸಂಜೆ ನಡೆಯಿತು.ದೇವರ ನಗರೋತ್ಸವವು ಸೋಮೇಶ್ವರ ದೇವಸ್ಥಾನದಿಂದ ಹೊರಟು ಪಡುವರಿ, ಬೈಂದೂರು, ಯಡ್ತರೆ, ರಾಹುತನಕಟ್ಟೆ, ಕಸ್ಟಮ್ಸ್ ರೋಡ್ ಪಡುವರಿ ಮುಂತಾದ ಕಡೆಗಳಲ್ಲಿ ನಗರೋತ್ಸವ ಸಂಚಾರ ನಡೆಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನ ಮಂಡಳಿಯ ಸರ್ವ ಸದಸ್ಯರು ಹಾಗೂ ಊರ ಭಕ್ತಾಭಿಮಾನಿಗಳು ಹಾಜರಿದ್ದರು.