ಶಿರೂರು: ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 8ನೇ ಬ್ರ್ಯೆನೋ ಬ್ರ್ಯೆನ್ ಸ್ಪರ್ಧೆಯಲ್ಲಿ ಶಿರೂರಿನ ಧೃತಿ ಜಯಂತ ಪೂಜಾರಿ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.ದುಬೈನ್ ರಶೀದ್ ಸಭಾಂಗಣದಲ್ಲಿ ನಡೆದ ಅಬಕಾಸ್ ಚಾಂಪಿಯನ್‌ಶಿಫ್‌ನಲ್ಲಿ ಕರ್ನಾಟಕ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದು ಸುಮಾರು 16 ದೇಶಗಳಿಂದ ಎರಡು ಸಾವಿರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಶಿರೂರಿನ ಮೇಲ್ಪಂಕ್ತಿ ಕೃಷ್ಣಿಮನೆ (ದೊಡ್ಮನೆ) ನಿವಾಸಿ ಜಯಂತ ಪೂಜಾರಿ ಹಾಗೂ ಚೇತನಾ ಪೂಜಾರಿ ಯವರ ಪುತ್ರಿ ಧೃತಿ ಪೂಜಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಅಬಕಾಸ್ ಅಂತರಾಷ್ಟ್ರೀಯ ಮುಖ್ಯಸ್ಥ ಆನಂದ ಸುಬ್ರಹ್ಮಣ್ಯಂ ಹಾಗೂ ಅಬಕಾಸ್ ತಾಂತ್ರಿಕ ಮುಖ್ಯಸ್ಥ ಅರುಲ್ ಸುಬ್ರಹ್ಮಣ್ಯ ಪ್ರಶಸ್ತಿ ವಿತರಿಸಿದರು.
ಉಡುಪಿ ಗಾರ್ಡ್‌ನ್ ರೆಸ್ಟೋರೆಂಟ್ ಮಾಲಕರಾದ ಜಯಂತ ಪೂಜಾರಿ ಹಾಗೂ ಚೇತನಾ ದಂಪತಿಯವರ ಪುತ್ರಿಯಾಗಿರುವ ಧೃತಿ ಮಡಿಕೇರಿಯ ಮಾಪಂಗಡ ಕವಿತಾ ಕುರುಂಬಯ್ಯ ಅವರ ಬ್ರ್ಯೆನೋ ಬ್ರ್ಯೆನ್ ಅಬಕಾಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.ಈಕೆ ಮಡಿಕೇರಿ ಸಂತ್ ಜೋಸೆಫ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾಳೆ.