ಶಿರೂರು : ಶ್ರೀ ಗರಡಿ ಮಹಾಸತಿ ದೇವಸ್ಥಾನ ಕಳಿಹಿತ್ಲು ಶಿರೂರು ಇದರ ಹಾಲುಹಬ್ಬ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಿತು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಸಂಜೆ ನಡೆದ ಯಕ್ಷಾಗಾನ ಕಾರ್ಯಕ್ರಮದಲ್ಲಿ ಕಳೆದ 35 ವರ್ಷಗಳಿಂದ ಜಾತ್ರಾ ಮಹೋತ್ಸವದ ಯಕ್ಷಗಾನ ಸೇವೆ ಸಲ್ಲಿಸುತ್ತಿರುವ ಬೆಳಿಯ ಮೊಗವೀರ ಕಳಿಹಿತ್ಲು ಹಾಗೂ ಕಳೆದ 18 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಪಾತ್ರದಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಸಂತೋಷ ಮೊಗವೀರ ಕಳಿಹಿತ್ಲು ಇವರನ್ನು ದೇವಸ್ಥಾನದ ವತಿಯಿಂದ ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಶ್ರೀಕಾಂತ ಶೆಟ್ಟಿ,ನಾಗೇಶ ಮೇಸ್ತ,ತುಳಸಿದಾಸ್ ಮೊಗೇರ್,ದೇವರಾಜ ಮೇಸ್ತ, ರತ್ನಾಕರ ಮೇಸ್ತ ಕಳಿಹಿತ್ಲು,ನಾಗೇಶ ಶೆಟ್ಟಿ, ನಾಗೇಶ ಮೇಸ್ತ ಕಳಿಹಿತ್ಲು ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

fifteen − eight =