ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಇದರ ಸಾಮಾಜಿಕ ಕಾರ್ಯ ಮತ್ತು ಸಮಾಜಮುಖಿ  ಸೇವೆಯನ್ನು  ಗುರುತಿಸಿ  ಅತ್ಯುತ್ತಮ ಘಟಕ ಪ್ರಶಸ್ತಿ ದೊರೆತಿದೆ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಜಿ ಶಂಕರ್ ಪ್ರಶಸ್ತಿ ನೀಡಿ ಗೌರವಿಸಿದರು.ಸುಮಾರು 22 ಘಟಕಗಳಲ್ಲಿ  ಬೈಂದೂರು -ಶಿರೂರು ಘಟಕವು 190 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು  ಪಡೆದುಕೊಂಡಿದೆ.20 ವರ್ಷಗಳಲ್ಲಿ  ಪ್ರಥಮ ಬಾರಿಗೆ ಘಟಕವು ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಕಸ್ಟಂ,ಕಾರ್ಯದರ್ಶಿ ಚಂದ್ರಶೇಖರ ಸೂರ್ಕುಂದ,ಮಾಜಿ ಅಧ್ಯಕ್ಷರು,ಗೌರವ ಸಲಹೆಗಾರರು,ಸಮಾಜದ ಗುರಿಕಾರರು,ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಜರಿದ್ದರು.

 

Leave a Reply

Your email address will not be published. Required fields are marked *

three × 2 =