ಬೈಂದೂರು: ಬೀರೇಶ್ವರ ಕಡ್ಕೆ ಇವರ ಆಶ್ರಯದಲ್ಲಿ ಕಡ್ಕೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಕೆ.ಪಿ.ಎಲ್ -2026 ಸೀಸನ್ – 1 ಕ್ರಿಕೆಟ್ ಪಂದ್ಯಾಟದಲ್ಲಿ ಯುನೈಟೆಡ್ ಊದೂರು ಮಡಿಲಿಗೆ ಕೆ.ಪಿ.ಎಲ್ ಟ್ರೋಪಿ ದೊರೆತಿದೆ ಹಾಗೂ ಲೆಜೆಂಡ್ ನೂಝ ತಂಡಕ್ಕೆ ರನ್ನರ್ ಆಫ್ ಪ್ರಶಸ್ತಿ ದೊರೆತಿದೆ. ತಂಡದಲ್ಲಿ ದರ್ಶನ್,ಸುಮಂತ್,ಯಾದವ,ಪ್ರದೀಪ್,ವಿನಾಯಕ,ಪೂಜನ್,ವಿಶ್ವನಾಥ,ಸನತ್,ಸಂಘಟಕ ಮಹಾದೇವ ಗೊಂಡ ಕಡ್ಕೆ ಹಾಗೂ ಬೀರೇಶ್ವರ ಕ್ರಿಕೆಟ್ ತಂಡದ ಸರ್ವ ಸದಸ್ಯರು ಹಾಜರಿದ್ದರು.
