ಬೈಂದೂರು; ಹಿಂದೂ ಸಂಗಮ ಆಯೋಜನಾ ಸಮಿತಿ ಬೈಂದೂರು ತಾಲೂಕು ಶಿರೂರು ಮಂಡಲ ಇದರ ವತಿಯಿಂದ ಹಿಂದೂ ಸಂಗಮ ರವಿವಾರ ಶಿರೂರು ಪೇಟೆ ಶಾಂತಾನಂದ ಆಶ್ರಮದ ಎದುರುಗಡೆ ನಡೆಯಿತು.ಬ್ರಹತ್ ಹಿಂದೂ ಸಂಗಮವನ್ನು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ದೀಪ ಪ್ರಜ್ವಲಿಸಿ ಮಾತನಾಡಿದ ಉದ್ಯಮಿ ಹಾಗೂ ಮಂಗಳೂರು ವಿಭಾಗದ ದೇವಸ್ಥಾನ ಸಂವಾರ್ಧನ ಸಮಿತಿ ಸಂಯೋಜಕ ಗಣೇಶ ಕಿಣಿ ಬೆಳ್ವೆ  ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟತೆಯ ಹಿರಿಮೆ ಇರುವುದು ನಮ್ಮ ಭರತಭೂಮಿಯದ್ದಾಗಿದೆ .ಜಗತ್ತನ್ನು ಪ್ರೀತಿಯಿಂದ ಗೆದ್ದಿರುವ ಹಿರಿಮೆಯಿದೆ.ಆದರ್ಶಗಳು ಭೋಧನೆಗಳಿಗಲ್ಲ ಬದಲಾಗಿ ಪಾಲನೆಗೆ ಎನ್ನುವ ಚಿಂತನೆ ನಮ್ಮದಾಗಬೇಕಿದೆ.ನಶ್ವರ ಬದುಕಿನಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮಾತ್ರ ಭರವಸೆಯಾಗಿದೆ.ಸಮಾಜದ ಋಣ ತೀರಿಸಬೇಕಾದ ಜವಬ್ದಾರಿ ನಮ್ಮೆಲ್ಲರದ್ದು.ಸನಾತನ ಧರ್ಮದ ಆಚರಣೆ ಜಾಗೃತಿ,ದೇಶಭಕ್ತಿ ಕೇವಲ ಯುದ್ದ ಅಥವಾ ಕ್ರಿಕೆಟ್ ಪಂದ್ಯಾಟಕ್ಕೆ ಸೀಮಿತವಾಗದೆ ಸಾರ್ವಕಾಲಿಕವಾಗಿರಬೇಕು. ಸಾಮಾಜಿಕ ಸಾಮರಸ್ಯ,ಕುಟುಂಬ ಪ್ರಭೋದನೆ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ ಹಾಗೂ ನಾಗರಿಕ ಶಿಷ್ಠಾಚಾರದ ಕುರಿತು ಜಾಗೃತಿ ಮೂಡಿಸುವುದು ಹಿಂದು ಸಂಗಮದ ಉದ್ದೇಶವಾಗಿದೆ. ಇದರಲ್ಲಿ ಗೋಪೂಜೆ, ದೇಶಭಕ್ತಿ ಮತ್ತು ಸಾಂಸ್ಕೃತಿಕಕ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಸಂಘಟಿಸಲಾಗುತ್ತಿದೆ ಎಂದರು.

ಶಿರೂರು ಹಿರಿಯ ವೈದ್ಯರಾದ ಡಾ.ಪ್ರಭಾಕರ ನಂಬಿಯಾರ್ ಪ್ರಾಸ್ತಾವಿಕ ಮಾತನಾಡಿ ಭವ್ಯ ಭಾರತದ ಸತ್ಪ್ರಜೆಗಳಾದ ನಾವೆಲ್ಲರು ಪರಸ್ಪರ ಪ್ರೀತಿ ವಿಶ್ವಾಸದ ಜೊತೆಗೆ ಸನಾತನ ಸಂಸ್ಕ್ರತಿಯ ತಳಹದಿಯ ಪಾಲನೆಯೊಂದಿಗೆ ಮುಂದಿನ ತಲೆಮಾರುಗಳನ್ನು ಬೆಳೆಸುವ ಜವಬ್ದಾರಿ ಇದೆ.ಈ ಮೂಲಕ ಹಿಂದೂ ಸಂಗಮ ಪ್ರತಿ ಗ್ರಾಮದಲ್ಲೂ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಶಿರೂರಿನ ಡಾ.ಸುರೇಖಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿರೂರು ಜ್ಞಾನದ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಶಿರೂರ್‍ಕರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿರೂರು ಗ್ರಾಮದ ಪೌರ ಕಾರ್ಮಿಕರನ್ನು, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳನ್ನು ಹಾಗೂ ಶಿರೂರಿನ ಪೋಸ್ಟ್‌ಮ್ಯಾನ್‌ಗಳನ್ನು ಸಮ್ಮಾನಿಸಲಾಯಿತು.ಸಭಾ ಕಾರ್ಯಕ್ರಮದ ಮೊದಲು ಶಿರೂರು ಮಾರ್ಕೆಟ್‌ನಿಂದ ಕೆಳಪೇಟೆಯವರೆಗೆ ಬ್ರಹತ್ ಶೋಭಾಯಾತ್ರೆ ನಡೆಯಿತು.ಸಾವಿರಾರು ಹಿಂದೂ ಬಾಂಧವರು ಶೋಭಾಯಾತ್ರೆಯಲ್ಲಿ ಪಾಲ್ಗೋಂಡರು.

ಸಂಘಟನೆಯ ಮುಖ್ಯಸ್ಥ ತುಳಸಿದಾಸ್ ಮೊಗೇರ್ ಶಿರೂರು ಸ್ವಾಗತಿಸಿದರು.ರಮ್ಯಾ ರವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

 

 

Leave a Reply

Your email address will not be published. Required fields are marked *

two × one =