ಬೈಂದೂರು: ಬೈಂದೂರಿನ ಐತಿಹಾಸಿಕ ಪ್ರಸಿದ್ದ ಹೋಲಿಕ್ರಾಸ್ ಇಗರ್ಜಿಯಲ್ಲಿ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ ರವರ ಅಧ್ಯಕ್ಷತೆಯಲ್ಲಿ
ಸಮುದಾಯದ ದಿವಸವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಕಿರುಕ್ರಿಸ್ತ ಸಮುದಾಯ ಆಯೋಗದ ನಿರ್ದೇಶಕ ವಂದನೀಯ ಹೆರಾಲ್ಡ್ ಪೀರೆರಾರವರು ಸಮುದಾಯಕೋಸ್ಕರ ನಾವುಗಳು, ನಮಗಾಗಿ ಸಮುದಾಯ ಎಂಬ ಚಿಂತನೆಯಲ್ಲಿ ಜೀವಿಸಿದರೆ ಸಮಾಜದಲ್ಲಿ ಏಕತೆ, ಒಗ್ಗಟ್ಟು ಬಲಿಷ್ಠವಾಗಿರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ವಲಯದ ಮುಖ್ಯ ಧರ್ಮಗುರು ವಂದನೀಯ ಸ್ಟ್ಯಾನಿ ತಾವ್ರೋ, ಕೋಟ ಇಗರ್ಜಿಯ ಧರ್ಮಗುರು ವಂದನೀಯ ಎ. ಡಿಲೀಮಾ, ಸಿಸ್ಟರ್ ಆನ್ಸಿ, ಉಪಾಧ್ಯಕ್ಷ ಸ್ಟ್ಯಾನಿ ಡಾಯಸ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಅನಿತಾ ನಜ್ರೆತ್ ಸ್ವಾಗತಿಸಿದರು.ವೀಣಾ ಫೆನಾಂಡಿಸ್ ಹಾಗೂ ರೋಶನ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.ಆಯೋಗದ ಸಂಚಾಲಕಿ ಮೇಬಲ್ ನಜ್ರೆತ್ ವಂದಿಸಿದರು.