ಶಿರೂರು: ಊರಿನ ಅಭಿವೃದ್ದಿಯಾಗಬೇಕಾದರೆ ಕ್ರಿಯಾಶೀಲ ಚಿಂತನೆ ಮತ್ತು ಯುವ ಸಮುದಾಯದ ಆಸಕ್ತಿ ಮುಖ್ಯವಾಗಿರುತ್ತದೆ.ಕ್ರೀಡೆಯ ಮೂಲಕ ಸಂಘಟನೆಯ ಜೊತೆಗೆ ಸಹಭಾಳ್ವೆ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಮೈದಿನಪುರದಲ್ಲಿ ನಡೆದ ಬ್ರಹ್ಮಲಿಂಗೇಶ್ವರ ಕ್ರಿಕೆಟರ್‍ಸ್ ಇವರ ಆಶ್ರಯದಲ್ಲಿ ನಡೆದ 5ನೇ ವರ್ಷದ ವಾರ್ಷಿಕೋತ್ಸವದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಶಾಶ್ವತ ಫಲಕವನ್ನು ಅನಾವರಣಗೊಳಿಸಿ ಮಾತನಾಡಿ ಗ್ರಾ.ಪಂ ಸದಸ್ಯ ಉದಯ ಪೂಜಾರಿ ನೇತ್ರತ್ವದಲ್ಲಿ ಯುವ ಸಂಘಟನೆ ಮೂಲಕ ಇಂತಹ ಉತ್ತಮ ಕಾರ್ಯಕ್ರಮ ಸಂಘಟಿಸಲಾಗಿದೆ.ಕ್ರೀಡೆ ಬಾಂಧವ್ಯದ ಜೊತೆಗೆ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸಂಘಟನೆ ಮನೋಭಾವನೆ ಬೆಳೆಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್,ಜಿಲ್ಲಾ ಕೆ.ಡಿ.ಪಿ ಸದಸ್ಯ ರಾಮ ಕೆ.ಸೋಡಿತಾರ್,ನಾಗರಾಜ ಗಾಣಿಗ,ಶಿರೂರು ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಶಂಕರ ಶಿರೂರು,ಗ್ರಾ.ಪಂ ಸದಸ್ಯರಾದ ಸುರೇಂದ್ರ ದೇವಾಡಿಗ,ನಾಗರತ್ನ ವಿ.ಆಚಾರ್,ಪ್ರಸನ್ನ ಶೆಟ್ಟಿ ಕರಾವಳಿ,ಶಕೀಲ್ ಅಹ್ಮದ್,ನಾಗರಾಜ ಪೂಜಾರಿ,ಶಿರೂರು ಯಕ್ಷ ಸಂಪದ ಅಧ್ಯಕ್ಷ ಚಿಕ್ಕು ಪೂಜಾರಿ,ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್,ಧ.ಗ್ರಾ.ಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ,ರವಿಕಾಂತ ಆಚಾರಿ,ಅಯ್ಯಪ್ಪ ಶ್ಯಾಮಿಯಾನ ಮಾಲಕ ರವೀಂದ್ರ ಶೆಟ್ಟಿ ಹೊನ್ಕೇರಿ,ಮಹೇಶ ಮೊಗವೀರ ದೊಂಬೆ,ರಾಜೇಶ್ ಆಚಾರಿ,ರಾಘವೇಂದ್ರ ಪೂಜಾರಿ,ಗೋಪಾಲ ಪೂಜಾರಿ ವಸ್ರೆ,ಹರೀಶ್ ಕೆ.ಮೇಲ್ಪಂಕ್ತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ನಾಗಪ್ಪಯ್ಯ ಆಚಾರ್ ಕೋಣೆಮನೆ,ಅಣ್ಣಪ್ಪ ಶೆಟ್ಟಿ ಮೈದಿನಪುರ ಹಾಗೂ ಪತ್ರಕರ್ತ ಅರುಣ್ ಕುಮಾರ್ ಶಿರೂರು ರವರನ್ನು ಸಮ್ಮಾನಿಸಲಾಯಿತು ಹಾಗೂ ಸ್ಥಳೀಯ ಶಾಲೆಗಳಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬ್ರಹ್ಮಲಿಂಗೇಶ್ವರ ಕ್ರಿಕೆಟರ್‍ಸ್ ಅಧ್ಯಕ್ಷ ಹಾಗೂ ಗ್ರಾ.ಪಂ ಸದಸ್ಯ ಉದಯ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗುರುರಾಜ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.ಕಿರಣ ಪೂಜಾರಿ ಪೇಟೆ ವಂದಿಸಿದರು.ಕ್ರಿಕೆಟ್ ಪಂದ್ಯಾಟದಲ್ಲಿ 8 ಸ್ಟಾರ್ ಉಪ್ಪುಂದ ಪ್ರಥಮ ಸ್ಥಾನ ಪಡೆದರು ಹಾಗೂ ದಿನ್ನಾ ಪ್ರೆಂಡ್ಸ್ ಮೈದಿನಪುರ ದ್ವಿತೀಯ ಸ್ಥಾನ ಪಡೆದರು.