ಬೈಂದೂರು: ಕಳೆದ 125 ದಿನಗಳಿಂದ ರೈತರು ನ್ಯಾಯಕ್ಕಾಗಿ ಅನಿಧಿ೯ಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.ಸರಾಕರದ ಮಟ್ಟದಲ್ಲಿ ನ್ಯಾಯ ಸಿಗುವ ಹಂತದಲ್ಲಿದ್ದರು ಕೂಡ ಬೈಂದೂರು ಶಾಸಕರು ಅಡ್ಡಿಪಡಿಸುತ್ತಿದ್ದಾರೆ.ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಮುರು ತಿಂಗಳುಗಳಿಂದ ಆಧಾರ್ ಕಾರ್ಡ್ ಕಛೇರಿ ಮುಚ್ಚಿದೆ.ಬೈಂದೂರು ಪಶು ಆಸ್ಪತ್ರೆಯಲ್ಲಿ ಸವಲತ್ತುಗಳಿಲ್ಲ, ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಗ್ರಾಮೀಣ ಭಾಗದಲ್ಲಿ ಕುಡಿಯಲು ನೀರು ದೊರೆಯುತ್ತಿಲ್ಲ, ಮರಳು ದಂಧೆಯಲ್ಲಿ ರಾಜಕಾರಣಿಗಳು ಜನಸಮಾನ್ಯರ ರಕ್ತ ಹೀರುತ್ತಿದ್ದಾರೆ.ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಶ್ರೀಮಂತರನ್ನು ಕರೆಸಿ ಸಮ್ಮಾನ ಮಾಡುವ ಈ ಬೈಂದೂರು ಉತ್ಸವ ಯಾವ ಸಂಭ್ರಮಕ್ಕೆ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ರವಿವಾರ ಬೈಂದೂರು ತಾಲೂಕು ಆಡಳಿತ ಸೌಧದ ಎದುರು 125ನೇ ದಿನದ ಅನಿಧಿ೯ಷ್ಟಾವಧಿ ಧರಣಿ ನೇತ್ರತ್ವ ವಹಿಸಿ ಈ ಮಾತನಾಡಿ ಶಾಸಕರು ಬೈಂದೂರು ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಗಮನಹರಿಸುತ್ತಿಲ್ಲಾ ಬದಲಾಗಿ ಯಾರ್ ಯಾರನ್ನು ರಾಜಕೀಯವಾಗಿ ಮುಗಿಸಬೇಕು ಮತ್ತೆ ಶಾಸಕರಾಗಲು ಎನೇನು ಪ್ರಯತ್ನಗಳು ಮಾಡಬೇಕು ಎನ್ನುವ ಚಿಂತನೆಯಲ್ಲಿದ್ದಾರೆ.ಶಾಸಕರು ಮಾಡಿದ ಅನ್ಯಾಯಕ್ಕೆ ಗ್ರಾಮೀಣ ಬಾಗದ ರೈತರು ಸರಿಯಾಗಿ ಮುಂದಿನ ದಿನದಲ್ಲಿ ಬುದ್ದಿ ಕಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಸುಬ್ರಹ್ಮಣ್ಯ ಬಿಜೂರು,ವೀರಭದ್ರ ಗಾಣಿಗ,ಅರುಣ್ ಕುಮಾರ್ ಶಿರೂರು,ಸಾಜು ಅತ್ಯಾಡಿ,ಪದ್ಮಾಕ್ಷ ಗೋಳಿಬೇರು,ಕೇಶವ ಅಂತಾರ್,ಹೆರಿಯಣ್ಣ ಪೂಜಾರಿ,ಮೊದಲಾದವರು ಹಾಜರಿದ್ದರು.

