ಬೈಂದೂರು: ಕಳೆದ ಹಲವು ದಿನಗಳಿಂದ ಬೈಂದೂರು ವತ್ತಿನೆಣೆ ಪರಿಸರದಲ್ಲಿ ಮೀನಿನ ತ್ಯಾಜ್ಯದ ನೀರುಗಳನ್ನು ರಸ್ತೆಗೆ ಬಿಡುತ್ತಿರುವ ಬಗ್ಗೆ ಹಲವು ಬಾರಿ ವರದಿ ಕೂಡ ಮಾಡಲಾಗಿತ್ತು.ಆದಕ್ಕೆ ಕಾರ್ಯಪ್ರವೃತ್ತರಾದ ಬೈಂದೂರು ಪಟ್ಟಣ ಪಂಚಾಯತ್ ತಂಡ ಬುಧವಾರ ಮೀನು ಸಾಗಾಟ ಮಾಡುವ ವಾಹನಕ್ಕೆ ದಂಡ ವಿಧಿಸಿ ಕಾನೂನು ಕ್ರಮಕೈಗೊಳ್ಳಲಾಯಿತು.ಈ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಹೆದ್ದಾರಿ ಬದಿಯಲ್ಲಿ ಮೀನಿನ ತ್ಯಾಜ್ಯದ ನೀರನ್ನು ಹೊರಬಿಡುವ ವಾಹನಗಳಿಗೆ ಎಚ್ಚರಿಕೆ ನೀಡಲಾಯಿತು ಮತ್ತು ತ್ಯಾಜ್ಯ ನೀರು ಬಿಡುತ್ತಿರುವುದು ಕಂಡು ಬಂದರೆ ಪಟ್ಟಣ ಪಂಚಾಯಿತಿಗೆ ದೂರು ನೀಡಲು  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

two × 4 =