ಬೈಂದೂರು: ಬೈಂದೂರು ಶಾಸಕರ ಗೆಲುವಿನ ಹಿಂದೆ ನಮ್ಮಂತ ಸಾವಿರಾರು ಕಾರ್ಯಕರ್ತರ ಪರಿಶ್ರಮವಿದೆ.ನನ್ನ ಬೆಳವಣಿಗೆಯನ್ನು ಸಹಿಸದೆ ಮುಂದಿನ ದಿನದಲ್ಲಿ ಪ್ರತಿ ಸ್ಪಧಿ೯ಯಾಗಿ ಬೆಳೆಯುತ್ತಾರೆ ಎನ್ನುವ ಉದ್ದೇಶದಿಂದ ಹಲವು ರೀತಿಯಲ್ಲಿ ತುಳಿಯುವ ಪ್ರಯತ್ನ ಮಾಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕುಮ್ಮಕ್ಕಿನಿಂದ ನನ್ನನು ಉಚ್ಚಾಟನೆ ಮಾಡುವ ಪ್ರಯತ್ನ ರಾಜಕೀಯ ಕೊಲೆ ಮಾಡಿದಂತೆ.ಕಳೆದ 13 ವರ್ಷ ಹಗಲಿರುಳು ಪಕ್ಷ ಸಂಘಟನೆಗಾಗಿ ದುಡಿದ ಪರಿಶ್ರಮ ನನ್ನ ಅಂತರಂಗಕ್ಕೆ ಗೊತ್ತಿದೆ.ಬೈಂದೂರು ಈಗಿನ ಶಾಸಕರು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದ್ದಾರೆ.ಆಕ್ರಮಗಳು ಸಾಲು ಸಾಲು ಪಟ್ಟಿ ಇದೆ.ತೆರೆಮರೆಯಲ್ಲಿ ನಡೆಸಿದ ಪಕ್ಷ ವಿರೋಧಿ ಚಟುವಟಿಕೆಗೆ ಲೆಕ್ಕವಿಲ್ಲ.ಮೊದಲು ಬೈಂದೂರು ಶಾಸಕರನ್ನು ಉಚ್ಚಾಟನೆ ಮಾಡಬೇಕು.ಬಡವರ ಮನೆ ಹುಡುಗ ಎನ್ನುವುದು ಇವರದು ಬರೀ ನಾಟಕ.ಬರಿಗಾಲ ಸಂತ ಬಂದ ಮೇಲೆ ಬೈಂದೂರಿಗೆ ಬರಗಾಲ ಬಂದಿದೆ ಎಂದು ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಬೈಂದೂರು ರೈತ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.
ರೈತರ ಹೋರಾಟದ ಹಿನ್ನೆಡೆಗೆ ಶಾಸಕರೆ ಕಾರಣ: ಕಳೆದ ನಾಲ್ಕು ತಿಂಗಳಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ರೈತರು ಹೋರಾಟ ನಡೆಸುತ್ತಿದ್ದಾರೆ.ಸರಕಾರ, ಜಿಲ್ಲಾಡಳಿತ ರೈತರ ಬೇಡಿಕೆ ಈಡೇರಿಸುವ ಹಂತದಲ್ಲಿದ್ದರು ಸಹ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವಕ್ಕೆ ಜಯ ಸಿಕ್ಕಂತಾಗುತ್ತದೆ ಎನ್ನುವ ಒಂದೆ ಕಾರಣಕ್ಕೆ ರಾಜ್ಯ ಮಟ್ಟದಲ್ಲಿ ರೈತರಿಗೆ ನ್ಯಾಯ ಸಿಗದಂತಾಗಲಿ ಎನ್ನುವುದಕ್ಕೆ ಬೈಂದೂರು ಶಾಸಕರು ಕಾರಣರಾಗಿದ್ದಾರೆ.ಮರಳುಗಾರಿಕೆಯಲ್ಲಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಿಂಗಳಿಗೆ 35 ಲಕ್ಷ ಹಣ ಬರುತ್ತಿದೆ.ಎಲ್ಲಾ ಭಾಗದಲ್ಲೂ ಶಾಸಕರ ಭ್ರಷ್ಟಾಚಾರ ಮಿತಿ ಮೀರಿದೆ.ಕಾರ್ಯಕರ್ತರನ್ನು ತುಳಿದು ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಬೈಂದೂರು ಉತ್ಸವ ಯಾವ ಸಾಧನೆಗೆ : ಯಾವುದಾದರು ಕಾರ್ಯದಲ್ಲಿ ಯಶಸ್ಸು ಸಾಧಿಸಿದರೆ ಸಹಜವಾಗಿ ಸಂಭ್ರಮ ಮಾಡುತ್ತಾರೆ.ಆದರೆ ಬೈಂದೂರು ಶಾಸಕರು ಕ್ಷೇತ್ರಕ್ಕೆ ಎನು ಕೊಡುಗೆ ನೀಡಿದ್ದಾರೆ.ಬೈಂದೂರಿನಲ್ಲಿ ಊರುಸ್ ಮಾಡುತ್ತೇವೆ ಎಂದು ವಿದೇಶದಲ್ಲಿ ಹಣ ಸಂಗ್ರಹಿಸಿದ್ದಾರೆ.ಉತ್ಸವದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ.ಉತ್ಸವದಿಂದ ಬೈಂದೂರಿನ ಜನರಿಗೆ ಎನಿದೆ ಲಾಭ?. ಇವರ ಉತ್ಸವ ರೈತರ ಹೆಣದ ಮೇಲೆ ನಡೆಯುವ ಉತ್ಸವ ಇದಾಗಿದೆ.ಹೀಗಾಗಿ ಆಗಮಿಸುವ ಸಚಿವರು,ವಿವಿಧ ನಾಯಕರು,ರೈತ ವಿರೋಧಿಗಳಾಗಿದ್ದಾರೆ ಮಾತ್ರ ಉತ್ಸವದಲ್ಲಿ ಭಾಗವಹಿಸುತ್ತಾರೆ ಎಂದರು.
ಬಿಜೆಪಿ ಪಕ್ಷದ ನಿಯಮದ ಪ್ರಕಾರ ನನ್ನ ಉಚ್ಚಾಟನೆಯಾಗಿಲ್ಲ.ಈ ಆದೇಶಕ್ಕೆ ಯಾವುದೇ ಬೆಲೆಯಿಲ್ಲ.ನಾನು ಕಾರ್ಯಕರ್ತರ ಹೃದಯದಲ್ಲಿ ಸದಾ ಇದ್ದೇನೆ.ನಾನು ಯಾವತ್ತು ಕೂಡ ಬಿಜೆಪಿ ಕಾರ್ಯಕರ್ತ ನನ್ನನ್ನು ಉಚ್ಚಾಟನೆ ಮಾಡಲು ಸಾದ್ಯವಿಲ್ಲ.ಉಚ್ಚಾಟನೆ ಮಾಡಬೇಕಾಗಿರುವುದು ಬೈಂದೂರು ಶಾಸಕರನ್ನು ಎಂದು ದೀಪಕ್ ಕುಮಾರ್ ಶೆಟ್ಟಿ ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ,ಸುರೇಂದ್ರ ಖಾರ್ವಿ,ಲಿಮೋನ್ ಅತ್ಯಾಡಿ,ಭಾಸ್ಕರ ಮರಾಠಿ ಗಂಗನಾಡು,ಮಾಜಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆಕಾಶ್ ಪೂಜಾರಿ ಹಾಜರಿದ್ದರು.
ವರದಿ/ಗಿರಿ ಶಿರೂರು