ಬೈಂದೂರು: ಬೈಂದೂರು ತಾಲೂಕು ಇತಿಹಾಸ ಪ್ರಸಿದ್ಧ ಯಡ್ತರೆ,ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಪರಿವಾರ ಶಕ್ತಿಗಳ ಗರಡಿ ನಾಕಟ್ಟೆ ಯಡ್ತರೆ ಇದರ ದಿವ್ಯ ಸನ್ನಿಯಲ್ಲಿ ಚತುರ್ಥ ಪ್ರತಿಷ್ಠಾ ವರ್ಧಂತ್ಯೋತ್ಸವ,ಸಾನಿಧ್ಯ ಕಲಶೋತ್ಸವ,ಅನ್ನಸಂತರ್ಪಣೆ,ಬೈದರ್ಕಳ ಸಂದರ್ಶನ,ಅಗೇಲು ಸೇವೆ,ಪಂಜುರ್ಲಿ ಕೋಲ ಸೇವೆ ಹಾಗೂ ಗೆಂಡ ಸೇವೆ ಜ.25 ರಂದು ನಡೆಯಲಿದೆ,
ಬೆಳಿಗ್ಗೆ ವೇ.ಮೂ .ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತ್ರತ್ವದಲ್ಲಿ ಸಾನಿಧ್ಯ ಕಲಶೋತ್ಸವ,ಅಗೇಲು ಸೇವೆ,ಬೈದರ್ಕಳ ದರ್ಶನ,ಗೆಂಡ ಸೇವೆ,ಮಹಾಅನ್ನಸಂತರ್ಪಣೆ ಹಾಗೂ ಸಿರಿ ಸಿಂಗಾರದ ಕೋಲ ಸೇವೆ ನಡೆಯಲಿದೆ ಎಂದು ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಗರಡಿ ಅಧ್ಯಕ್ಷ ಎಸ್.ರಾಜು ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
