ಶಿರೂರು; ಸಪರಿವಾರ ಶ್ರೀಮಹಾಸತಿ ದೇವಸ್ಥಾನ ಮಾರ್ಕೆಟ್ ಶಿರೂರು ಇದರ 9ನೇ ವಾರ್ಷಿಕೋತ್ಸವ ಮತ್ತು ಹಾಲುಹಬ್ಬ ಬುಧವಾರ ಸಂಪನ್ನಗೊಂಡಿತು. ಬೆಳಿಗ್ಗೆ ಅರ್ಚಕರ ಸಮ್ಮುಖದಲ್ಲಿ ಪ್ರಾರ್ಥನೆ ಹೋಮ, ತುಲಾಭಾರ ಸೇವೆ, ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಘುವೀರ ಶೇಟ್,ಗೌರವಾಧ್ಯಕ್ಷ ಎಸ್.ಪ್ರಕಾಶ ಪ್ರಭು,ದೈವಸ್ಥಾನದ ಅರ್ಚಕರು ಹಾಗೂ ದೈವಸ್ಥಾನ ಆಡಳಿತ ಮಂಡಳಿ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.


Photo/Krishna Smart Studio Shiruru