ಶಿರೂರು: ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು ಇದರ 30ನೇ ವರ್ಷದ ಭಜನೋತ್ಸವ ಪ್ರಯುಕ್ತ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ -2026 ಜ.24 ರಂದು ನಾಗಶ್ರೀ ಭಜನಾ ಮಂಡಳಿ ಆವರಣದಲ್ಲಿ ನಡೆಯಲಿದೆ.

ಬೆಳಿಗ್ಗೆ ದೇವರ ಸನ್ನಿಧಿಯಲ್ಲಿ ಗಣಪತಿ ಪೂಜೆ,ಪುಣ್ಯಹವಾಚನ,ಪಂಚವಿಂಶತಿ,ಕಲಶ ಪೂಜೆ,ಕಲಾವೃದ್ದಿಹೋಮ,ಕಲಶಾಭಿಷೇಕ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8:30ಕ್ಕೆ ರಾಜ್ಯದ ಆಹ್ವಾನಿತ ಭಜನಾ ತಂಡಗಳಿಂದ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ -2026 ನಡೆಯಲಿದೆ.ಪ್ರಥಮ ;30,000 ರೂಪಾಯಿ ಶಾಶ್ವತ ಫಲಕ,ದ್ವಿತೀಯ 20,000 ರೂಪಾಯಿ ಶಾಶ್ವತ ಫಲಕ ಹಾಗೂ ತೃತೀಯ 13,000 ರೂಪಾಯಿ ಶಾಶ್ವತ ಫಲಕ ದೊರೆಯಲಿದೆ ಎಂದು ಭಜನಾ ಮಂಡಳಿಯ ಅಧ್ಯಕ್ಷ ನಾರಾಯಣ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

1 × five =