ಬೈಂದೂರು: ರೈತ ಸಂಘ ಬೈಂದೂರು ಇದರ ರೈತರ ನೂತನ ಕಛೇರಿಯನ್ನು ಪ್ರಗತಿಪರ ಕೃಷಿಕರು ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿದರು ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹೋರಾಟದಿಂದ ಮಾತ್ರ ಬೇಡಿಕೆ ಈಡೇರಿಸಿಕೊಳ್ಳಲಾಗುವುದಿಲ್ಲ ಆದರೆ ಹೋರಾಟಗಳ ಹಾದಿ ಅಷ್ಟು ಸುಲಭವಲ್ಲ.ಅದರಲ್ಲೂ ಬೈಂದೂರಿನ ಇತಿಹಾಸದಲ್ಲಿ ರೈತರು ಅತೀ ದೀರ್ಘದಲ್ಲಿ ಹೋರಾಟ ಎನ್ನುವ ದಾಖಲೆ ಬೈಂದೂರು ರೈತ ಸಂಘ ಮಾಡಿದೆ.ಸರಕಾರ, ಇಲಾಖೆ ಆದಷ್ಟು ಶೀಘ್ರ ರೈತರಿಗೆ ನ್ಯಾಯ ಒದಗಿಸಬೇಕಿದೆ.ರೈತ ಕಛೇರಿ ಮೂಲಕ ಕೃಷಿ ವಿಚಾರ ವಿನಿಮಯ, ಕೃಷಿಕರಿಗೆ ಸಹಾಯ ಮತ್ತು ಮಾಹಿತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದ ಎಂದರು.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಕಳೆದ ನಾಲ್ಕು ತಿಂಗಳುಗಳಿಂದ ನ್ಯಾಯಕ್ಕಾಗಿ ಬೈಂದೂರು ರೈತರು ಹೋರಾಟ ನಡೆಸುತ್ತಿದ್ದು ಸರಕಾರದಿಂದ ನ್ಯಾಯ ದೊರೆಯುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ .ವರ್ಷ ಕಳೆದರು ಪ್ರತಿಭಟನೆ ಮುಂದುವರಿಸುತ್ತೇವೆ.ಹೀಗಾಗಿ ರೈತರ ಚರ್ಚೆ,ಕಾರ್ಯಕ್ರಮ, ವಿಚಾರ ವಿನಿಮಯದ ಉದ್ದೇಶದಿಂದ ರೈತರ ಕಛೇರಿ ಆರಂಭವಾಗಿದ್ದು ಬೈಂದೂರು ಕ್ಷೇತ್ರದ ಪ್ರತಿ ರೈತರು ಮುಕ್ತವಾಗಿ ರೈತರ ಕಛೇರಿಯನ್ನು ಉಪಯೋಗಿಸಿಕೊಳ್ಳಬಹುವುದು ಎಂದರು.
ಕೆ.ಆರ್.ಎಸ್ ಬೆಂಗಳೂರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ, ಬೈಂದೂರು ಗ್ರಾ.ಪಂ ಮಾಜಿ ಸದಸ್ಯ ಗಣೇಶ ಪೂಜಾರಿ,ನಾಗಪ್ಪ ಮರಾಠಿ,ಲಿಮೋನ್ ಬೈಂದೂರು,ಪದ್ಮಾಕ್ಷ ಗೋಳಿಬೇರು,ಹಿರಿಯರಾದ ಹೆರಿಯಣ್ಣ ಪೂಜಾರಿ ಗೋಳಿಬೇರು,ಕೇಶವ ಪೂಜಾರಿ ಅಂತಾರ್,ರೈತ ಮುಖಂಡರು,ಗ್ರಾಮೀಣ ಭಾಗದ ರೈತರು ಹಾಗೂ ಆರ್.ಎಸ್ ಬೆಂಗಳೂರು ಪಕ್ಷದ ಸದಸ್ಯರು ಹಾಜರಿದ್ದರು.



ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಭಾಷ್ ಗಂಗನಾಡು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ/ಗಿರಿ ಶಿರೂರು